Read - < 1 minute
ಬೀಜಿಂಗ್, ಅ.9: ಬ್ರಹ್ಮ ಪುತ್ರ ನದಿಗೆ ಟಿಬೆಟ್ ನಲ್ಲಿ ಅಡ್ಡಲಾಗಿ ನಿರ್ಮಿಸುತ್ತಿರುವ ಅಣೆಕಟ್ಟೆಯಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಚೀನಾ ಹೇಳಿದ್ದು, ಇದು ಭಾರತಕ್ಕೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಈ ಕುರಿತಂತೆ ಪಿಟಿಐಗೆ ಇಂದು ಸ್ಪಷ್ಟನೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ನದಿಯ ವಾರ್ಷಿಕ ಹರಿಯುವ ನೀರಿನ ಶೇ.0.02 ರಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ. ಇದರಿಂದ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ಯಾವುದೆ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.ಅಣೆಕಟ್ಟು ನಿರ್ಮಾಣದಿದಂದ ಟಿಬೆಲ್ ನಲ್ಲಿರುವ ಜನರಿಗೆ ಆಹಾರ ಭದ್ರತೆ, ಉದ್ಯೋಗವನ್ನು ಸೃಷ್ಟಿಸಬಹುದಾಗಿದೆ. ಅಲ್ಲದೆ ಪ್ರವಾಹವನ್ನು ತಡೆಯಬಹುದಾಗಿದೆ. ಬ್ರಹ್ಮಪುತ್ರ ನದಿಯನ್ನು ಚೀನಾ ದೇಶವು ಕೇವಲ. ಶೇ.1 ರಷ್ಟು ಮಾತ್ರ ಬಳಸಿಕೊಳ್ಲಿದೆ. ಯೋಜನೆಯಿಂದ ಬ್ರಹ್ಮಪುತ್ರ ನದಿಯ ಹರಿವಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಹಾಗೂ ಭಾರತಕ್ಕೂ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ತಿಳಿಸಿದೆ.
ಟಿಬೆಟ್‌ನ ಗ್ಯಾಕಾ ಕೌಂಟಿಯಲ್ಲಿ ಯುರ್ಲುಂಗ್ ಝಾಂಗ್‌ಮೂ ಅಣೆಕಟ್ಟೆಯಲ್ಲಿ 6 ಜಲ ವಿದ್ಯುತ್ ಉತ್ಪಾದನಾ ಘಟಕಗಳ ಮೂಲಕ ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಅಲ್ಲದೆ ಡ್ಯಾಮ್‌ನಲ್ಲಿರುವ ಹೆಚ್ಚುವರಿ ನೀರನ್ನು ಬೇರೆಡೆ ತಿರುಗಿಸಲು ಚೀನಾ ಮುಂದಾಗಿದೆ. ಇದರಿಂದ ಬ್ರಹ್ಮಪುತ್ರ ನದಿಯಿಂದ ಭಾರತಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುವ ಭೀತಿ ಎದುರಾಗಿದೆ.
Discussion about this post