ನವದೆಹಲಿ, ಅ.23: ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತ ಆರ್ಥಿಕತೆ ಮತ್ತು ಡಿಜಿಟಲ್ ಕ್ರಾಂತಿಯನ್ನು ಭಾರತ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಭಾರತದಲ್ಲಿ ನಿರ್ಣಯ ಮತ್ತು ಜಾರಿ ಪ್ರಕ್ರಿಯೆಯನ್ನು ಬಲಪಡಿಸಲು ರಾಷ್ಟ್ರೀಯ ಉಪಕ್ರಮ ಕುರಿತ ಜಾಗತಿಕ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದ್ದು, ಈ ಕ್ರಾಂತಿ ಸಮಾಜದಲ್ಲಿನ ಡಿಜಿಟಲ್ ಮತ್ತು ಆರ್ಥಿಕ ಅಂತರದ ನಡುವಿನೆ ಸೇತುವೆಯಾಗಿದೆ ಎಂದು ಹೇಳಿದರು.
ಕೋರ್ಟ್ಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಕೂಡ ಈಗ ನಿಮ್ಮ ಮೊಬೈಲ್?ನಲ್ಲಿ ಕೇವಲ ಒಂದು ಕ್ಲಿಕ್ ನಿಂದ ಸಿಗುತ್ತವೆ.1000ಕ್ಕೂ ಹೆಚ್ಚು ಹಳೆಯ ಅನುಪಯುಕ್ತ ಕಾನೂನುಗಳನ್ನು ರದ್ದು ಪಡಿಸಲಾಗಿದೆ. ಸಮಗ್ರ ದಿವಾಳಿತನ ನಿಯಮ 2016ನ್ನು ನಾವು ಜಾರಿಗೊಳಿಸಿದ್ದೇವೆ. ರಾಷ್ಟ್ರೀಯ ಕಂಪೆನಿ ಲಾ ಟ್ರಿಬ್ಯೂನಲ್ಸ್ ಜಾರಿಗೊಳಿಸಿದ್ದೇವೆ. ಹೈಕೋರ್ಟ್ ಗಳ ವಾಣಿಜ್ಯ ನ್ಯಾಯಾಲಯಗಳು, ವಾಣಿಜ್ಯ ವಿಭಾಗ, ವಾಣಿಜ್ಯ ಮೇಲ್ಮನವಿ ವಿಭಾಗಗಳ ಕಾಯ್ದೆ 2015ನ್ನು ತ್ವರಿತ ಇತ್ಯರ್ಥಕ್ಕಾಗಿ ರೂಪಿಸಿದ್ದೇವೆ ಎಂದು ಅವರು ನುಡಿದರು.
ರಾಷ್ಟ್ರಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಮಾಹಿತಿ ಸಲುವಾಗಿ ರಾಷ್ಟ್ರೀಯ ನ್ಯಾಯಾಂಗ ಜಾಲ (ನ್ಯಾಷನಲ್ ಜ್ಯುಡಿಷಿಯಲ್ ಗ್ರಿಡ್) ಸ್ಥಾಪನೆಮಾಡಲಾಗಿದೆ. ಪರ್ಯಾಯ ವಿವಾದ ಇತ್ಯರ್ಥಕ್ಕಾಗಿ ಸ್ಪಂದನಶೀಲ ವ್ಯವಸ್ಥೆ ರೂಪಿಸಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
Discussion about this post