Read - < 1 minute
ಜಿನೇವಾ: ಬಲೂಚಿಸ್ಥಾನ ವಿಷಯದಲ್ಲಿ ಪಾಕಿಸ್ಥಾನವನ್ನು ಮೂಲೆಗುಂಪು ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳು ಧನಾತ್ಮಕ ಫಲಿತಾಂಶ ನೀಡುತ್ತಿರುವ ಹಾಗೆ ಕಂಡು ಬರುತ್ತಿದೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಐರೋಪ್ಯ ಸಂಸತ್ತಿನ ಉಪಾಧ್ಯಕ್ಷ ರಿಸ್ಜಾರ್ಡ ಝರ್ನೆಕಿ ಅವರು ಶುಕ್ರವಾರ ಬಲೂಚಿಸ್ಥಾನ ವಿಷಯದಲ್ಲಿ ಪಾಕಿಸ್ಥಾನಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ.
ಬಲೂಚಿಸ್ಥಾನದಲ್ಲಿ ಹತ್ಯೆಗೀಡಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಝರ್ನಿಕಿ ಅವರು, ಬಲೂಚ್ ಜನರ ಮೇಲೆ ದೌರ್ಜನ್ಯವನ್ನು ನಿಲ್ಲಿಸಲು ಪಾಕಿಸ್ಥಾನ ವಿಫಲವಾದಲ್ಲಿ ಅದರ ವಿರುದ್ಧ ಆರ್ಥಿಕ ಮುತ್ತ ರಾಜಕೀಯ ನಿರ್ಬಂಧಗಳನ್ನು ಹೇರುವ ಎಚ್ಚರಿಕೆ ನೀಡಿದ್ದಾರೆ
ನ್ಯೂಯಾರ್ಕ ನಗರದಲ್ಲಿನ ವಿಶ್ವಸಂಸ್ಥೆ ಕಚೇರಿ ಬಳಿ ಬುದವಾರ ಪಾಕಿಸ್ಥಾನ ವಿರುದ್ಧ ಬಲೂಚಿ ಜನರು ಮತ್ತು ಭಾರತೀಯರು ಪ್ರತಿಭಟನೆಗಳನ್ನು ನಡೆಸಿದ ನಂತರ ಐರೋಪ್ಯ ಒಕ್ಕೂಟದ ಈ ಹೇಳಿಕೆ ಹೊರಬಿದ್ದಿದೆ. ಬಲೂಚಿಸ್ಥಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಧಾನಿ ನರೇಂದ್ರ ಮೋದಿ ಎತ್ತಿ ತೋರಿಸಿದಂದಿನಿಂದ ದೇಶ ತೊರೆದು ಜೀವನ ಸಾಗಿಸುತ್ತಿರುವ ಅನೇಕ ಬಲೂಚ್ ನಾಯಕರು ಪಾಕಿಸ್ಥಾನದ ಬಿಗಿ ಹಿಡಿತದಿಂದ ಪ್ರಕ್ಷುಬ್ಧ ಬಲೂಚಿಸ್ಥಾನಕ್ಕೆ ಸ್ವಾತಂತ್ರ್ಯ ದೊರಕಿಸಬೇಕು – ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತಿದ್ದಾರೆ.
ಪಾಕಿಸ್ಥಾನ ಒಂದು ಉದ್ಧಟ ದೇಶ ಎಂದು ದೇಶ ತೊರೆದಿರುವ ಬಲೂಚಿಸ್ಥಾನ ನಾಯಕ ಕಲಾತ್ ಅಮೀರ್ನ ಖಾನ್ ಅಹ್ಮದ್ ಸುಲೇಮಾನ್ ದಾವುದ್ ಕರೆದಿದ್ದಾರೆ.
ಈ ಮಧ್ಯೆ ಬಲೂಚ್ ರಿಪಬ್ಲಿಕನ್ ಪಾರ್ಟಿ (ಬಿ ಆರ್ಪಿ)ಯ ಅಧ್ಯಕ್ಷ ಬಲೂಚ್ ರಾಷ್ಟ್ರೀಯವಾದಿ ನಾಯಕ ಬ್ರಹಮ್ದಘ ಬುಗ್ತಿ ವಿವಾದಾತ್ಮಕ ನಡೆಯೊಂದರಲ್ಲಿ ಭಾರತದಲ್ಲಿ ರಾಜಾಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ಥಾನ ಪ್ರಾಂತ್ಯದಲ್ಲಿ ಪಾಕಿಸ್ಥಾನಿ ಸೇನೆ ನಡೆಸಿರುವ ಬರ್ಬರ ಹತ್ಯೆಗಳ ಹನದಯವಿದ್ರಾವಕ ಚಿತ್ರಗಳನ್ನು ಲೂಚ್ ಮಹಿಳೆ ಎಂದು ಹೇಳಿಕೊಳ್ಳುತ್ತಿರುವ ಬನುಕ್ ಶಿರಿನ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ಥಾನವು ಬಲೂಚ್ ಜನರ ವಿರುದ್ಧ ಯುದ್ಧಾಪರಾಧಗಳನ್ನು ಎಸಗುತ್ತಿದೆ ಎಂದು ಯುಎನ್ ಎಚ್ಆರ್ಸಿಯಲ್ಲಿನ ಬಲೂಚಿಸ್ಥಾನ ಪ್ರತಿನಿಧಿ ಆರೋಪಿಸಿದ್ದು, ಬಲೂಚ್ ಮತ್ತು ಸಿಂಧ್ ಪ್ರದೇಶಗಳಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಪಾಕಿಸ್ಥಾನವನ್ನು ದಂಡಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.
Discussion about this post