ಮಡಿಕೇರಿ ಅ.14: ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ 15 ನೆಯ ವಾರ್ಷಿಕೋತ್ಸವದ ಪ್ರಯುಕ್ತ ಪತ್ರಕರ್ತರಿಗಾಗಿ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಆಯೋಜಿಸಲಾಗಿತ್ತು.
ಪತ್ರಿಕಾ ಭವನದಲ್ಲಿ ನಡೆದ ಸಿಂಗಲ್ಸ್ ಹಾಗೂ ಡಬ್ಬಲ್ಸ್ ವಿಭಾಗದ ಸ್ಫರ್ಧೆಯನ್ನು ಮಡಿಕೇರಿ ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪತ್ರಕರ್ತರು ಪ್ರತಿದಿನ ಸುದ್ದಿಗಳ ಜಂಜಾಟದಿಂದ ಮತ್ತು ಒತ್ತಡದಿಂದ ಹೊರಬಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ, ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಟ್ರಸ್ಟಿಗಳಾದ ಕೆ. ತಿಮ್ಮಪ್ಪ, ಶ್ರೀಧರ್‌ಹೂವಲ್ಲಿ, ಎಸ್.ಜಿ. ಉಮೇಶ್, ಪ್ರೆಸ್‌ಕ್ಲಬ್ ಉಪಾಧ್ಯಕ್ಷರಾದ ಶಶಿಸೋಮಯ್ಯ, ಪತ್ರಕರ್ತರಾದ ಜಿ.ವಿ. ರವಿಕುಮಾರ್, ಟಿ.ಕೆ. ಸಂತೋಷ್, ಭರತ್, ಉದಯ್ ಮೊಣ್ಣಪ್ಪ, ಸುರ್ಜಿತ್, ಗೋಪಾಲ್ ಸೋಮಯ್ಯ, ಅಲ್ಲಾರಂಡ ವಿಠಲ ನಂಜಪ್ಪ ಉಪಸ್ಥಿತರಿದ್ದರು.
News by: ಇಂದ್ರೇಶ್, ಮಡಿಕೇರಿ
Discussion about this post