ಮಂಗಳೂರು, ಸೆ.5: ಹಿಂದೂ ದೇವತೆಗಳ ಅವಮಾನ ಮಾಡುವ ದುಷ್ಟರನ್ನು ಹಾಗೂ ಮತಾಂಧ ಫಕೀರರನ್ನು ಜೈಲಿಗೆ ಅಟ್ಟದೆ ಬಿಡುವುದಿಲ್ಲ ಎಂದು ಸಾಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಮಂಗಳೂರಿನಲ್ಲಿರುವ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಟೀಲು ಅರ್ಚಕ ಅಸುರಣ್ಯರ ಕಣ್ಣಿರು ಕಂಡು ನನಗೂ ತುಂಬಾ ದುಃಖವಾಯಿತು. ಅವರ ಕಣ್ಣೀರು ವ್ಯರ್ಥವಾಗಲು ನಾವು ಬಿಡುವುದಿಲ್ಲ. ಅಲ್ಲದೇ, ಸಾಮಾಜಿಕ ಜಾಲಾತಾಣಗಳ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ದುಷ್ಕರ್ಮಿಗಳ ವಿಚಾರವನ್ನು ಪ್ರಧಾನ ಮಂತ್ರಿ ಗಳು ಮತ್ತು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದು ಶಂಕಿತ ವ್ಯಕ್ತಿ ವಿದೇಶದಲ್ಲಿದ್ದರು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಲಾಗುವುದು ಎಂದರು.
ವ್ಯಕ್ತಿ ಯೋರ್ವ ಸಾಮಾಜಿಕ ಜಾಲಾತಾಣಗಳಲ್ಲಿ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ಕುರಿತು ನಿಂದಿಸಿದ ಕುರಿತಾಗಿ ಬಿಎಸ್ ವೈಗೆ ಮನವಿ ಸಲ್ಲಿಸಿದ ಹಿಂದೂ ಪರ ಸಂಘಟನೆಗಳ ಸದಸ್ಯರು, ಆತನ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಬಿಎಸ್. ವೈ, ಕಟೀಲು ತಾಯಿಯ ಭಕ್ತರ ನೋವು ನನಗೆ ಅರ್ಥವಾಗಿದೆ. ಮುಸ್ಲಿಂ ಲೇಖಕರ ಸಂಘದ ಬೆಂಬಲಕ್ಕೆ ಧನ್ಯವಾದಗಳು. ಈ ಪ್ರಕರಣದಿಂದ ದೇಶ ವಿದೇಶಗಳಲ್ಲಿರುವ ಭಕ್ತರಿಗೂ ನೋವಾಗಿದೆ. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಎಲ್ಲೇ ಅಡಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತೇನೆ ಎಂದರು.
Discussion about this post