ವಿನೋದ್ ಪ್ರಭಾಕರ್ ನಟನೆಯ ‘ಮರಿ ಟೈಗರ್ ಚಿತ್ರಕ್ಕಾಗಿ ಪಿ.ಎನ್. ಸತ್ಯ ಅವರು ಬರೆದಿರುವ ‘ಅಂಕಲ್ ಅಂಕಲ್ ಮುಂದೆ ಬರ‌್ತಿರಾ‘ ಎಂಬ ಹಾಡಿನ ಚಿತ್ರೀಕರಣ ಮಿನರ್ವಮಿಲ್‌ನಲ್ಲಿ ಹಾಕಲಾಗಿದ್ದ ಸೆಟ್‌ನಲ್ಲಿ ನಡೆದಿದೆ. ಹರಿಕೃಷ್ಣ ನೃತ್ಯ ಸಂಯೋಜಿಸಿದ್ದ ಈ ಹಾಡಿನ ಚಿತ್ರೀಕರಣದಲ್ಲಿ ವಿನೋದ್ ಪ್ರಭಾಕರ್, ನೀತು ಹಾಗೂ ೨೫ಕ್ಕೂ ಹೆಚ್ಚು ನೃತ್ಯಗಾರರು ಅಭಿನಯಿಸಿದ್ದರು.
‘ಯಾವ ಕವಿಯೂ ತಂದೆತಾಯಿಯ ದೇವರೆಂದು ಕರೆದು ಬಿಟ್ಟನೋ‘ ಎಂಬ ಕಮಲಸಾರಥಿ ಅವರು ಬರೆದಿರುವ ಹಾಡಿನ ಚಿತ್ರೀಕರಣ ಮೆಜಿಸ್ಟಿಕ್ ರೈಲ್ವೇ ನಿಲ್ದಾಣದ ಸುತ್ತಮುತ್ತ ನಡೆದಿದೆ. ವಿನೋದ್ ಪ್ರಭಾಕರ್ ಅಭಿನಯಿಸಿದ್ದ ಈ ಹಾಡನ್ನು ಜೋಗಿ ಪ್ರೇಂ ಹಾಡಿದ್ದಾರೆ. ಈ ಹಾಡುಗಳ ಚಿತ್ರೀಕರಣದೊಂದಿಗೆ ‘ಮರಿ ಟೈಗರ್ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.
ನಂದ ಲವ್ಸ್ ನಂದಿತಾ, ಭಾಗ್ಯದ ಬಳೆಗಾರ ಚಿತ್ರಗಳನ್ನು ರಮೇಶ್ ಕಷ್ಯಪ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಪಿ.ಎನ್. ಸತ್ಯ ನಿರ್ದೇಶಿಸುತ್ತಿದ್ದಾರೆ.
ವಿನೋದ್ ಪ್ರಭಾಕರ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕೆ ‘ಚಿಂಗಾರಿ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಎರಡನೇ ನಾಯಕಿಯಾಗಿದ್ದ ತೇಜು ನಾಯಕಿಯಾಗಿದ್ದಾರೆ. ಅಜಯ್ ಕುಮಾರ್ ಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್ ರವಿ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.
Discussion about this post