ಲಕ್ನೋ, ಅ.9: ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ನಡೆಸುತ್ತಿದ್ದ ಭಾರೀ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಮೂವರ ಮೃತಪಟ್ಟಿದ್ದಾರೆ.
ಬಿಎಸ್ ಪಿ ಸಂಸ್ಥಾಪಕ ಕಾನ್ಷಿರಾಮ್ ಅವರ ತಿಥಿ ಅಂಗವಾಗಿ ಸ್ಮಾರಕ ಸ್ಥಳದಲ್ಲಿ ಭಾರೀ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದ್ವಾರದ ವೇಳೆ ನೂಕು ನುಗ್ಗಲು ಸಂಭವಿಸಿದ್ದು, ಘಟನೆಯಲ್ಲಿ ಮೂವರ ಧಾರುಣವಾಗಿ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೈಕಿ ಚಿಂತಾಜನಕ ಸ್ಥಿತಿಯಲ್ಲಿದ್ದ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಸ್‌ಪಿ ಕಾಲ್ತುಳಿತ ಸಂಭವಿಸಿಲ್ಲ ಎಂದಿದ್ದು, ಸಮಾವೇಶದಲ್ಲಿ ಓರ್ವ ಮಹಿಳೆ ವಿಪರೀತ ಸೆಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರಾಮಾಚಲ್ ರಾಜ್‌ಬರ್ ಹೇಳಿದ್ದಾರೆ. ಭಾರೀ ಸಂಖ್ಯೆಯ ಜನ ಸೇರಿದ್ದೇ ದುರಂತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
Discussion about this post