ನವದೆಹಲಿ: ಉರಿ ಸೆಕ್ಟರ್‌ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರ ದಾಳಿಯನ್ನು ಸೈನಿಕರ ವಿಧವೆಯರು ಖಂಡಿಸಿದ್ದು, ರಕ್ತಕ್ಕೆ ರಕ್ತವೇ ಪ್ರತೀಕಾರ ದಾಳಿಗೆ ದಿಟ್ಟ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ಧರ್ಮಾವತಿ ಎಂಬುವವರ ಪತಿ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ೨೦೧೩ರ ಜನವರಿ ೮ ರಂದು ಹುತಾತ್ಮರಾಗಿದ್ದರು. ಅಂದು ಸುಷ್ಮಾ ಸ್ವರಾಜ್ ಅಧಿಕಾರಕ್ಕೆ ಬಂದಿರೆ ೧೦ ತಲೆಗಳನ್ನು ಕಡಿದು ತರುತ್ತೇವೆಂದು ಹೇಳಿದ್ದರು. ಇದೀಗ ಉರಿ ಸೆಕ್ಟರ್‌ನಲ್ಲಿ ೧೮ ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಕನಿಷ್ಟ ಪಕ್ಷ ೩೬ ತಲೆಗಳನ್ನಾದರು ಕಡಿದು ತರಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೊರಾನ್ ಸಿಂಗ್ ಅವರ ಪತ್ನಿ ಕಮ್ಲೇಶ್ ದೇವಿ ಮಾತನಾಡಿ, ಹೇಡಿತನದಿಂದ ದಾಳಿ ಮಾಡುವವರ ವಿರುದ್ಧ ಯುದ್ಧ ಮಾಡಲು ಸಂಪೂರ್ಣವಾಗಿ ಭಾರತೀಯ ಸೇನೆಗೆ ಸ್ವತಂತ್ರವನ್ನು ನೀಡಬೇಕೆಂದು ಹೇಳಿದ್ದಾರೆ.
ಯೋಧನ ಪತ್ನಿಯೊಬ್ಬಳು ವಿಧವೆಯಾದಾಗ ಆಕೆ ಪಡುವಂತಹ ನೋವು, ವೇದನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ರೀತಿಯ ದಾಳಿ ವಿರುದ್ಧ ಅಧಿಕಾರಿಗಳು ನೇರವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹುತಾತ್ಮ ಯೋಧ ಶಾಹೀದ್ ಸಮೋದ್ ಕುಮಾರ್ ಚೌಧರಿ ಅವರ ಪತ್ನಿ ಸೀಮಾ ಚೌಧರಿಯವರು ಹೇಳಿದ್ದಾರೆ.
Discussion about this post