ಬೆಂಗಳೂರು, ಅ.20: ನವೆಂಬರ್ ೧ರ ಕನ್ನಡ ರಾಜ್ಯೋತ್ಸವ ಸನಿಹಗೊಂಡಂತೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಭಾರೀ ಲಾಭಿ ಆರಂಭವಾಗಿದೆ. ಈ ಬಾರಿಯ ಪ್ರಶಸ್ತಿಯನ್ನು ನೀಡುವಾಗ ಕಾಂಗ್ರೆಸ್ ಏಜೆಂಟರಿಗೆ ಸಿಂಹಪಾಲು ದೊರೆಯುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಕುರಿತಂತೆ ವಿಧಾನಸೌಧದ ಮೊಗಸಾಲೆಯಿಂದ ವಿವಿಧ ರೀತಿಯ ಸುದ್ಧಿಗಳು ಹೊರಬರುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಏಜೆಂಟರು ಭಾರೀ ಲಾಭಿ ನಡೆಸುತ್ತಿದ್ದಾರೆ.
ಕ್ರೀಡೆಯಂತಹ ಒಂದೆರಡು ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಕಾಂಗ್ರೆಸ್ ಏಜೆಂಟರಿಗೇ ಹೆಚ್ಚಿನ ಆದ್ಯತೆ ನೀಡುವಂತೆ ವಿವಿಧ ಅಕಾಡೆಮಿಗಳು ನೇರವಾಗಿಯೇ ಬ್ರೋಕರ್‌ಗಳಂತೆ ಲಾಭಿ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಹಲವು ಅಕಾಡೆಮಿಗಳೇ ಈ ರೀತಿಯ ಬ್ರೋಕರ್‌ಗಿರಿಗೆ ಇಳಿದಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಲು ಹಲವು ಸಂಸ್ಥೆಗಳು ನಿರ್ಧರಿಸಿವೆ.
ಕಾಂಗ್ರೆಸ್ ಪರವಾಗಿರುವ ಸಾಹಿತಿಗಳು, ಕಲಾವಿದರು, ಪತ್ರಕರ್ತರನ್ನೇ ಗುರುತಿಸಿ, ಇವರಿಗೇ ಪ್ರಶಸ್ತಿ ನೀಡುವಂತೆ ಹಲ ಅಕಾಡೆಮಿಗಳು ಸರ್ಕಾರಕ್ಕೆ ಪತ್ರ ಬರೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ, ಇದುವರೆಗಿನ ಇತಿಹಾಸದಲ್ಲೇ ನಡೆಯದ ಈ ರೀತಿಯ ಭಟ್ಟಂಗಿ ವರ್ತನೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಮೂಲಗಳು ಹೇಳಿವೆ.
ನಾಡು, ನುಡಿಗೆ ಸೇವೆ ಸಲ್ಲಿಸಿದ ಗಣ್ಯರು ಅಸಂಖ್ಯಾತರಿರುವಾಗ ಕಾಂಗ್ರೆಸ್ ಏಜೆಂಟರಿಗೇ ಪ್ರಶಸ್ತಿಯ ಸಿಂಹಪಾಲು ಒದಗಿಸಲು ವಿವಿಧ ಅಕಾಡೆಮಿಗಳು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯೇ ಭಾರಿ ವಿವಾದಕ್ಕೆ ಗುರಿಯಾಗುವ ಲಕ್ಣಣಗಳು ಕಾಣುತ್ತಿವೆ.
ಹೀಗಾಗಿ, ಕ್ರೀಡೆಯಂತಹ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳ ಅಲ್ಪಕಾಲೀನರಿಗೆ ಕಾಂಗ್ರೆಸ್ ಏಜೆಂಟರು ಎಂಬ ಕಾರಣಕ್ಕಾಗಿ ಪ್ರಶಸ್ತಿ ಸಲ್ಲುವುದು ಖಚಿತ ಎಂದು ಮೂಲಗಳು ಹೇಳಿದ್ದು ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವೆ ಉಮಾಶ್ರೀ ಈ ಅಪಸವ್ಯ ನಡೆಯದಂತೆ ನೋಡಿಕೊಳ್ಳಬೇಕಿದೆ.
ಆಯ್ಕೆ ಪ್ರಕ್ರಿಯೆ ಮಾರ್ಗಸೂಚಿಯನ್ವಯ ಇಲ್ಲ
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ತಜ್ಞರ ಸಮಿತಿಯ ಮಾರ್ಗಸೂಚಿಗಳನ್ವಯ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಇಂದು ಮಾಹಿತಿ ನೀಡಿದೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸರ್ಕಾರ ನಿರ್ಧಿಷ್ಟ ಮಾರ್ಗಸೂಚಿ ಅಥವಾ ಮಾನದಂಡಗಳನ್ನು ಅನುರಿಸಸುತ್ತಿಲ್ಲ ಎಂದು ಆರೋಪಿಸಿ ಸಾಹಿತಿ ಬಿ.ವಿ. ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರಿದ್ದ ಪೀಠಕ್ಕೆ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ. ಶಿವಣ್ಣ ಈ ಕುರಿತು ಪ್ರಮಾಣಪತ್ರ ಸಲ್ಲಿಸಿದರು.
ಹಾಲಿ ಪದ್ಧತಿಯಂತೆ, ಅ. ೨೫ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಆಯ್ಕೆಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಲಿ ಎಂದು ಹೈಕೋರ್ಟ್ ತಿಳಿಸಿದೆ.
ಅ. ೫ರಂದು ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ತಜ್ಞರ ಸಮಿತಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಅನುರಿಸಬೇಕಾದ ಮಾನದಂಡಗಳ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಕರಡು ಮಾನದಂಡಗಳಿಗೆ ಅಗತ್ಯವಿದ್ದಲ್ಲಿ ಕೆಲವೊಂದು ತಿದ್ದುಪಡಿ ಮಾಡಿ ಅನುಮೋದನೆ ನೀಡಿದ ಬಳಿಕ, ೨೦೧೭ನೇ ಸಾಲಿನಿಂದ ಅವುಗಳನ್ನು ಅನುಸರಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

Discussion about this post