Read - < 1 minute
ಮಂಗಳೂರು, ಅ.9: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ
ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಅರ್ಜಿಗೆ ಸಂಬಂಧಿಸಿ ಕೋರ್ಟ್ ಸರ್ಕಾರದ ಅಭಿಪ್ರಾಯ ಕೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಸರ್ಕಾರದ ಕಾನೂನು ತಜ್ಞರು ನೋಡಿಕೊಳ್ಳುತ್ತಾರೆ. ಕಾವೇರಿ ವಿಚಾರದಲ್ಲಿ ಕೇಂದ್ರ ತಜ್ಞರ ತಂಡಕ್ಕೆ ರಾಜ್ಯದ ಸಂಕಷ್ಟ ಅರ್ಥವಾಗಿದೆಹೀಗಾಗಿ ನ್ಯಾಯಾಲಯಕ್ಕೆ ಸೂಕ್ತ ವರದಿ ನೀಡೋ ಮೂಲಕ ನ್ಯಾಯ ಸಿಗೋ ಭರವಸೆ ಇದೆ. ಮಹದಾಯಿ ವಿಚಾರಕ್ಕೆ ಸಂಬಂಧಿಸಿ ಇದೇ 21ರಂದು ಮಹಾರಾಷ್ಟ್ರದಲ್ಲಿ ಸಭೆಗೆ ಹಾಜರಾಗುತ್ತೇನೆ.
ಕಿರಿಯ ಮಗ ಯತೀಂದ್ರನನ್ನ ನನ್ನ ಕ್ಷೇತ್ರದ ಮತದಾರರಿಗೆ ಪರಿಚಯಿಸಿದ್ದೇನಷ್ಟೇ. ಈ ವಿಚಾರದಲ್ಲಿ ಬೇರೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ಯತೀಂದ್ರನಿಗೆ ಅವನ ಕೆಲಸದ ಜೊತೆ ಕ್ಷೇತ್ರಕ್ಕೆ ಭೇಟಿ ಕೊಡುವಂತೆ ನಾನೇ ಸೂಚಿಸಿದ್ದೆ ಹಿರಿಯ ಮಗ ಮಾಡುತ್ತಿದ್ದ ಕೆಲಸವನ್ನು ಯತೀಂದ್ರ ಮಾಡಲಿ ಎಂದ ಉದ್ದೇಶ ಅಷ್ಟೇ ಎಂದು ಹೇಳಿದರು.
Discussion about this post