ಮೊರಾದಾಬಾದ್, ಸೆ.27: ಈಗಾಗಲೇ ಹಲವು ವಿವಾದ ಹಾಗೂ ವಿಚಾರಗಳನ್ನು ಮೈಮೇಲೆ ಎಳೆದುಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಈಗ ಮತ್ತೊಂದು ಗುರುತರ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ರಾಹುಲ್‌ಗಾಂಧಿ ಅವರ ರ‌್ಯಾಲಿಯಲ್ಲಿ ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳಲಾಗಿದ್ದು, ಈ ಕುರಿತಂತೆ ರಾಷ್ಟ್ರೀಯ ಖಾಸಗೀ ಮಾಧ್ಯಮವೊಂದು ವರದಿ ಮಾಡಿದೆ.
ಉರಿ ದಾಳಿ ಹುತಾತ್ಮರಿಗೆ ಗೌರವ ಸಲ್ಲಿಸಲು ಕಾಂಗ್ರೆಸ್ ಪರವಾಗಿ ಅಲ್ಲಿನ ಸ್ಥಳೀಯ ಘಟಕ ರ‌್ಯಾಲಿ ಆಯೋಜಿಸಲಾಗಿತ್ತು. ಈ ರ‌್ಯಾಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ, ಪಾಕಿಸ್ಥಾನ ಜಿಂದಾಬಾದ್ ಎಂಬ ದೇಶ ವಿರೋಧಿ ಘೋಷಣೆಗಳು ಮೊಳಗಿದ್ದು, ಉರಿ ದಾಳಿ ಹುತಾತ್ಮರಿಗೆ ಅವಮಾನ ಮಾಡಲಾಗಿದೆ.
ಈ ವಿಚಾರ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದ್ದು, ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅನುಕಂಪದ ಮತ ಗಿಟ್ಟಿಸಲು ಈ ಗಿಮಿಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಹುಲ್‌ಗಾಂಧಿ ರ‌್ಯಾಲಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್‌ನ ಮಾಜಿ ಸಾಂಸದ ರಮ್ಯಾ ಸೇರಿದಂತೆ ಹಲವಾರು ಪ್ರಮುಖರು ಪಾಕ್ ಪರ ವಕಾಲತ್ತು ವಹಿಸಿ ಈಗಾಗಲೇ ವಿರೋಧಕ್ಕೆ ಕಾರಣವಾಗಿದ್ದಾರೆ. ಇದೇ ವೇಳೆ, ಈ ರ‌್ಯಾಲಿ ವಿಚಾರ ಕಾಂಗ್ರೆಸ್‌ಗೆ ಸಂಧಿಗ್ದತೆಯನ್ನು ತಂದೊಡ್ಡಿದೆ.
Discussion about this post