ದೇವರಿಯ, ಸೆ.7 : ಉತ್ತರ ಪ್ರದೇಶದ ದೇವರಿಯ ಜಿಲ್ಲೆಯ ರುದ್ರಾಪುರ್ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ದೂಧ್ನಾಥ್ ಬಾಬಾ ಮಂದಿರ ಮೈದಾನದ ರೈತರ ರ್ಯಾಲಿಯು ಹಗ್ಗದ ಮಂಚಕ್ಕಾಗಿ ಪರಸ್ಪರ ಕಚ್ಚಾಡುವ ಮೂಲಕ ಅಸ್ತವ್ಯಸ್ತತೆಯ ಗೊಂದಲದ ಗೂಡಾಯ್ತು.
ಖಾತ್ ಸಭಾದಲ್ಲಿದ್ದ ಸುಮಾರು 2500 ಹಗ್ಗದ ಮಂಚಕ್ಕಾಗಿ ರೈತರು ಎಳೆದಾಡಿ ಶಕ್ತಿ ಇದ್ದವನಿಗೆ ಮಂಚ ದೊರೆತು ರ್ಯಾಲಿ ಕೋಲಾಹಲದ ತಾಣವಾಗಿ ಕಾಂಗ್ರೆಸ್ಗೆ ಮುಜುರವನ್ನುಂಟು ಮಾಡಿದೆ.
2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನೇ ಕೇಂದ್ರೀಕರಿಸಿ ರೈತ ಬಾಹುಳ್ಯದ ರುದ್ರಾಪುರ್ನಲ್ಲಿ ಖಾತ್ ಸಭಾ ರೈತ ರ್ಯಾಲಿಯನ್ನು ರಾಜ್ಯ ಕಾಂಗ್ರೆಸ್ ಏರ್ಪಡಿಸಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಂತರ 2500ಕಿ.ಮೀ.ದೂರದ ದಿಲ್ಲಿಗೆ ಕಿಸಾನ್ ಯಾತ್ರೆಯನ್ನೂ ಯೋಜಿಸಲಾಗಿತ್ತು.
ಆದರೆ ತನ್ಮಧ್ಯೆ ಖಾತಾ (ಹಗ್ಗದ ಮಂಚ)ದೊಂದಿಗೆ ರೈತರು ಮೈದಾನ ತೊರೆಯುತ್ತಾ ಇದ್ದುದರಿಂದ ರ್ಯಾಲಿಯ ಜನಸ್ತೋಮ ಕರಗುತ್ತಿದ್ದಂತೆ ಕಾಂಗ್ರೆಸ್ ಪೇಚಿಗಿಟ್ಟುಕೊಂಡು ಕಿಸಾನ್ ಯಾತ್ರೆ ರದ್ದಾಯಿತು.
ಆರಂಭದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಉದ್ಯಮಿಗಳ ಪಕ್ಷಪಾತಿ. ಈ ದೇಶದ ರೈತರನ್ನು ಕಡೆಗಣಿಸಿರುವ ಮೋದಿ ಸರಕಾರ ರೈತರ ಸಾಲ ಮನ್ನಾ ಮಾಡುವ ಬದಲು ಶ್ರೀಮಂತ ಉದ್ಯಮಿಗಳು ಪಡೆದ ಸಾಲಗಳನ್ನು ಮನ್ನಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶ ಮತ್ತು ಇತರೆಡೆ ರೈತರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದರು.
ರೈತರು ಎದುರಿಸುವ ಸಮಸ್ಯೆ ಹಾಗೂ ರೈತರ ಸಂಕಷ್ಟ ಸ್ಥಿತಿಯನ್ನು ಮೋದಿ ಗಮನಕ್ಕೆ ತರಲೆಂದೇ ಇಲ್ಲಿಂದು (ಮಂಗಳವಾರ) ರೈತ ರ್ಯಾಲಿಯನ್ನು ಕಾಂಗ್ರೆಸ್ ಏರ್ಪಡಿಸಿದೆ. ಯಾವತ್ತೂ ಉತ್ತರ ಪ್ರದೇಶದಲ್ಲಿ ರೈತರ ಬೆಂಬಲ ಕಾಂಗ್ರೆಸಿಗೆ ಎಂಬುದನ್ನು ಕೇಂದ್ರಕ್ಕೆ ನಮ್ಮ ಪಕ್ಷವು ತೋರಿಸಿದೆ. ರಾಜ್ಯ ಸರಕಾರ ಕೂಡ ಈ ಸತ್ಯವನ್ನು ಪ್ರತ್ಯಕ್ಷ ಕಂಡು ಅರಿತುಕೊಳ್ಳಲೆಂದು ಗಾಂಧಿ ಕುಟುಕಿದರು.
ಉತ್ತರ ಪ್ರದೇಶ ಸರಕಾರ ರೈತರಿಗಾಗಿ ವಿದ್ಯುತ್ ದರವನ್ನು ಶೇ.50ಕ್ಕಿಳಿಸಿ ರೈತರ ಬೆವರಿನ ಫಲಕ್ಕೆ ಕೃತಜ್ಞತೆ ಸಲ್ಲಿಸಲೆಂದೂ ರಾಹುಲ್ ಗಾಂಧಿ ರ್ಯಾಲಿಯಲ್ಲಿ ಅಭಿಪ್ರಾಯಪಟ್ಟರು.
ರ್ಯಾಲಿಯಲ್ಲಿ ಭಾಗವಹಿಸಿದ ರೈತರಿಗೆ ಆಸೀನರಾಗುವುದಕ್ಕಾಗಿ 2000 ಖಾತ (ಹಗ್ಗದ ಮಂಚ)ಗಳನ್ನು ಮೈದಾನದಲ್ಲಿ ಹಾಕಲಾಗಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರೈತರೊಂದಿಗೆ ಸಂವಹನ ನಡೆಸುವ ಕಾರ್ಯಕ್ರಮವಿದ್ದು, ಅವರು ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಂತೆ ಭಾಷಣ ಮುಗಿಸುವ ಮೊದಲೇ ರೈತರು ಮಂಚಕ್ಕಾಗಿ ಕಿತ್ತಾಡಿ, ಎಲೆದಾಡಿದ್ದರಿಂದ ರ್ಯಾಲಿ ಗೊಂದಲದ ಗೂಡಾಯಿತು.
ಪ್ರಧಾನಿ ಮೋದಿಯವರ 2014ರ ಚುನಾವಣೆ ಕಾಲದ ಚಾಯ್ ಪೆ ಚಚರ್ಾ ಮಾದರಿಯಲ್ಲೇ ಖಾತ್ ಸಭಾ ರ್ಯಾಲಿಯನ್ನು ಕಾಂಗ್ರೆಸ್ ಆಯೋಜಿಸಿದೆ.
Discussion about this post