ಅಹ್ಮದಾಬಾದ್, ಸೆ.20: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿಗಿ ಮುಖ್ಯಸ್ಥ ಭರತ್ ಸೋಳಂಕಿ, ರಾಹುಲ್‌ಗಾಂಧಿ ದೇಶದ ಪ್ರಧಾನಿಯಾಗಿದ್ದರೆ ಕಾಶ್ಮೀರದ ಸಮಸ್ಯೆ ಇರುತ್ತಿರಲಿಲ್ಲ ಎಂದಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಜಾತಿ ಮತ್ತು ಧರ್ಮದ ನೆಲೆಯಲ್ಲಿ ವಿಭಜಿಸುತ್ತಿದ್ದಾರೆ. ಉರಿ ಉಗ್ರ ದಾಳಿಯಲ್ಲಿ ೧೮ ಭಾರತೀಯ ಯೋಧರ ಹತ್ಯೆಯಾಗಿದ್ದರೂ ಪ್ರಧಾನಿ ಮೋದಿ ಅವರು ಇನ್ನೂ ಏಕೆ ಮೌನದಿಂದಿದ್ದಾರೆ ಎಂದು ಪ್ರಶ್ನಿಸಿದರು.
ಈ ಘಟನೆಗಳನ್ನು ನೋಡುತ್ತಿದ್ದರೆ ರಾಹುಲ್ ಗಾಂಧಿ ಪ್ರಧಾನಿಯಾಗಿರುತ್ತಿದ್ದರೆ ಕಾಶ್ಮೀರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
೧೯೭೧ರ ಯುದ್ಧದಲ್ಲಿ ಬಾಂಗ್ಲಾದೇಶವನ್ನು ಪಾಕಿಸ್ಥಾನದಿಂದ ಪ್ರತ್ಯೇಕಿಸುವ ಅಪಾರ ಧೈರ್ಯ ಮತ್ತು ದಿಟ್ಟತನವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ತೋರಿಸಿದ್ದರು. ಇಂದಿರಾ ಗಾಂಧಿಯಂತಹ ಧೀರ, ದಿಟ್ಟ, ಧೈರ್ಯವಂತ ನಾಯಕರು ನಮ್ಮ ದೇಶಕ್ಕೆ ಬೇಕಾಗಿದ್ದಾರೆ ಎಂದು ಹೇಳಿದ ಸೋಳಂಕಿ, ಉರಿ ಉಗ್ರ ದಾಳಿಯನ್ನು ಖಂಡಿಸಿದರು.
Malnad is a Cultural ‘Gharana’ of Great Minds: Dr. Jayamala at Sahyadri Utsava
Kalpa Media House | Shimoga | Invoking the poetic essence of the Malnad landscape, veteran actor, former minister, and Chairperson...
Read moreDetails














