ನವದೆಹಲಿ:ಸೆ-25: ಪ್ರಧಾನಿ ನರೇಂದ್ರ ಮೋದಿ ಅವರು ಸೆ.26ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಐದು ರಾಜ್ಯಗಳ ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಹೈದರಾಬಾದ್, ತಮಿಳುನಾಡಿನ ಕುಡಲೂರು, ಜಮ್ಮು, ಅಸ್ಸಾಂನ ಜೋರ್ಹಾಟ್ ಹಾಗೂ ಹಿಮಾಚಲ ಪ್ರದೇಶದ ಪಾಲಂಪುರ ಭಾಗದ ರೈತರ ಜತೆ ಒಂದು ಗಂಟೆ ಕಾಲ ಪ್ರಧಾನಿ ಚಚರ್ೆ ನಡೆಲಿದ್ದಾರೆ. ಈ ವೇಳೆ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಇವುಗಳಿಗೆ ಸರಕಾರದಿಂದ ಹೇಗೆ ಪರಿಹಾರೋಪಾಯ ಕಂಡು ಕೊಳ್ಳಬಹುದು ಎಂಬುದರ ಕುರಿತು ಚರ್ಚೆ ನಡೆಸ ಲಿದ್ದಾರೆ. ಜೊತೆಗೆ ರೈತರಿಗೆ ವಿವಿಧ ಬೆಳೆಗಳ ಸುಧಾರಿತ ನೂತನ ತಳಿಗಳನ್ನು ಪರಿಚಯಿಸಲಿದ್ದಾರೆ.
ಮೊದಲು ಹೈದರಾಬಾದ್ನ ಇಬ್ಬರು ರೈತರೊಂದಿಗೆ ಸಮಾಲೋಚನೆ ನಡೆಸಿ, ಸುಧಾರಿತ ನೂತನ ಅರಿಶಿಣ ಬೆಳೆ ತಳಿಯನ್ನು ಪರಿಚಯಿಸಲಿ ದ್ದಾರೆ. ಇದೇ ವೇಳೆ ಅವರಿಗೆ ಈ ತಳಿಗಳನ್ನು ಹೈದರಾಬಾದ್ನಲ್ಲೇ ಕೊಡುಗೆಯಾಗಿ ನೀಡಲಿದ್ದಾರೆ. ಬಳಿಕ ತಮಿಳುನಾಡಿದ ಕುಡಲೂರಿನ ರೈತರೊಂದಿಗೆ ಚರ್ಚೆ ನಡೆಸಿ, ಎರಡು ಹೂ ತಳಿಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
Discussion about this post