ವಿಯೆಂಟಿಯೇನ್,ಸೆ. 8: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಗುರುವಾರ ಇಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ತಕ್ಷಣದ ಆದ್ಯತೆಗಳ ಬಗ್ಗೆ ಚಚರ್ಿಸಿದ್ದಾರೆ.
ಭಾರತ – ಅಮೆರಿಕ ನಡುವಿನ ನಾಗರಿಕ ಪರಮಾಣು ಸಹಕಾರವನ್ನು ಅಧಿಕಗೊಳಿಸುವುದು ಮತ್ತು ಹವಾಮಾನ ಬದಲಾವಣೆ ಎದುರಿಸುವ ಬಗ್ಗೆ ಮೋದಿ – ಒಬಾಮ, ಉಭಯರೂ ದೀರ್ಘಕಾಲ ಚರ್ಚಿಸಿದರು.
ಭಾರತ – ಅಮೆರಿಕ ಸಂಬಂಧಗಳ ಕುರಿತಾಗಿ ಅಮೆರಿಕ ಅಧ್ಯಕ್ಷರೊಂದಿಗೆ ಹೆಚ್ಚು ಮಹತ್ವದ ಚಚರ್ೆ ನಡೆಸಿದ್ದಾಗಿ ನಂತರ ಮೋದಿ ಟ್ವೀಟಿಸಿದರು. ಇಲ್ಲಿ ನಡೆಯುತ್ತಿರುವ ಪೂರ್ವ ಏಶ್ಯಾ ಶೃಂಗ ಸಭೆಯ ನೇಪಥ್ಯದಲ್ಲಿ ಒಬಾಮರೊಂದಿಗೆ ಮೋದಿ ಚರ್ಚೆಸಿದ್ದರು. ಕಳೆದ 2 ವರ್ಷಗಳಲ್ಲಿ ಪ್ರಧಾನಿ ಮೋದಿ ಒಬಾಮರನ್ನು ಎಂಟನೇ ಬಾರಿ ಭೇಟಿಯಾದರು.
ಜಿಎಸ್ ಟಿಗೆ ಬೆಂಬಲ
ಭಾರತದ ಆರ್ಥಿಕ ಸುಧಾರಣೆಗೆ ಪ್ರಧಾನಿ ಮೋದಿ ಆರಂಭಿಸಿದ್ದ ಉಪಕ್ರಮಗಳನ್ನು ಅಧ್ಯಕ್ಷ ಒಬಾಮ ಶ್ಲಾಘಿಸಿದ್ದಾರೆ. ಜಿಎಸ್ಟಿ ಅಂಗೀಕಾರದಿಂದ ನಿರ್ಧಿಷ್ಟ ಆರ್ಥಿಕ ಚಟುವಟಿಕೆ ಹಿಡಿತ ಸಡಿಲಿಸಿ ಚುರುಕಾಗಲಿದೆ ಎನ್ನುವ ವಿಶ್ವಾಸವನ್ನು ಒಬಾಮ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.
ಉಭಯರ ಭೇಟಿ ಕಾಲದಲ್ಲೂ ಮೋದಿಯವರ ಉದ್ಯಮಶೀಲತೆಯ ಪರಿಕಲ್ಪನೆ ಮತ್ತು ಹೊಸ ಬದಲಾವಣೆಗಾಗಿ ಮೋದಿಯವರಲ್ಲಿ ಇರುವ ದೂರದೃಷ್ಟಿಯನ್ನು ಒಬಾಮ ಕೊಂಡಾಡಿದರು. ಭಾರತದಂತಹ ದೇಶಕ್ಕೆ ಇಂತಹ ದೂರ ದೃಷ್ಟಿ ಭಾರಿ ಮಹತ್ವದ್ದೆಂದು ಒಬಾಮ ಅಭಿಪ್ರಾಯಪಟ್ಟರು.
ತಾನು ಯಾವತ್ತೂ ಭಾರತದ ಮಿತ್ರನೆಂದಿರುವ ಒಬಾಮ, ಅಮೆರಿಕ ಭಾರತದ ಬಲಿಷ್ಠ ಪಾಲುದಾರನಾಗಿ ಮುಂದುವರಿಯಲಿದೆ ಎಂಬ ಭರವಸೆಯ ಮಾತುನ್ನಾಡಿದರು ಎಂದು ಮೂಲಗಳು ತಿಳಿಸಿವೆ.
ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ತಕ್ಷಣದ ಆದ್ಯತೆಗಳ ಬಗ್ಗೆ ಉಭಯ ನಾಯಕರು ಪರಾಮರ್ಶಿಸಿದರೆಂದು ಮೂಲಗಳು ಹೇಳಿವೆ.
ವರ್ಷ 2, ಭೇಟಿ 8 ಬಾರಿ !
ಇಲ್ಲಿ ನಡೆಯುವ ಪೂರ್ವ ಏಷ್ಯಾ ಶೃಂಗ ಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಕಳೆದ ಎರಡು ವರ್ಷ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಟನೇ ಬಾರಿ ಭೇಟಿಯಾಗಿದ್ದಾರೆ.
ವಿಶ್ವದ ಎರಡು ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಾಯಕದ್ವಯರು ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಗಾಢವಾಗಿಸುವ ಕುರಿತು ದೀರ್ಘ ಕಾಲ ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಉಭಯ ನಾಯಕರ ಭೇಟಿ ಸ್ನೇಹಪೂರ್ಣ ಮತ್ತು ಸೌಹಾರ್ದಯುತವಾಗಿತ್ತೆಂದು ಸ್ವರೂಪ್ ಆತ್ಮೀಯತೆಯಿಂದ ಮೋದಿ ಮತ್ತು ಒಬಾಮ ಚರ್ಚಿಸಿದರೆಂದು ಹೇಳಿದರು. ಮುಂದಿನ ನವೆಂಬರ್ಗೆ ಒಬಾಮ ಅವರ ಎರಡನೇ ಅಧ್ಯಕ್ಷೀಯ ಅವಧಿ ಕೊನೆಗೊಳ್ಳಲಿದೆ.
Discussion about this post