ಲಖ್ನೋ, ಅ.18: ಕಳೆದ ಶನಿವಾರ ವಾರಣಾಸಿಯಲ್ಲಿ ನಡೆದ ಕಾಲ್ತುಳಿತ ಪ್ರಕರಣ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನ್ಯಾಯಾಂಗ ತನಿಖೆಗೆ ಆದೇಶಸಿದ್ದಾರೆ.
ಘಟನೆಯ ಬಗ್ಗೆ ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ರಾಜ್ಮನಿ ಚೌಹಾಣ್ ಅವರು ತನಿಖೆ ನಡೆಸಲಿದ್ದು, ಎರಡು ತಿಂಗಳೊಳಗೆ ವರದಿ ಸಲ್ಲಿಸಲಿದ್ದಾರೆ. ಕಾಲ್ತುಳಿತದಲ್ಲಿ 25 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ವಾರಣಾಸಿಯ ರಾಮ್ನಗರ್ ಪ್ರದೇಶದ ರಾಜ್ಘಾಟ್ ಸೇತುವೆ ಮೂಲಕ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಗಡವೊಂದಕ್ಕೆ ಸೇರಿದ ಜನರು ತೆರಳುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿತ್ತು.
Discussion about this post