ಮುಂಬೈ:ಸೆ:22:ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿರುವುದನ್ನು ನೋಡಿರುವುದಾಗಿ ಶಾಲಾ ಮಕ್ಕಳಿಬ್ಬರು ಹೇಳಿರುವುದನ್ನು ಅನುಸರಿಸಿ ಮುಂಬೈನ ನೌಕಾ ಶಸ್ತ್ರಾಸ್ತ್ರ ಸಂಗ್ರಹಾಗಾರ “ಐಎನ್ಎಸ್ ಅಭಿಮನ್ಯು’ ಘಟಕದ ಭದ್ರತೆ ಹೆಚ್ಚಿಸಲಾಗಿದ್ದು, ಹೈಅಲಟರ್್ ಘೋಷಿಸಲಾಗಿದೆ.
ಉರಾನ್ ಮತ್ತು ಕಾರಂಜಾ ಪ್ರದೇಶದಲ್ಲಿ ಸೇನಾ ಸಮವಸ್ತ್ರ ಧರಿಸಿದ್ದ ತಂಡವೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನ್ನು ತಾವು ನೋಡಿದ್ದಾಗಿ ಶಾಲಾ ಮಕ್ಕಳು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪಶ್ಚಿಮ ನೌಕಾ ಪಡೆ ಮುಂಬೈ ಕರಾವಳಿಯಲ್ಲಿ ಹೈಅಲಟರ್್ ಘೋಷಿಸಿದೆ ಮತ್ತು ಮುಂಬಯಿ ಉಗ್ರ ನಿಗ್ರಹ ದಳದೊಂದಿಗೆ ಶೋಧ ಕಾಯರ್ಾಚರಣೆ ನಡೆಸುತ್ತಿದೆ ಎಂದು ಭಾರತೀಯ ನೌಕಾಪಡೆಯ ಮುಖ್ಯ ಪಿಆರ್ ಒ ಕ್ಯಾಪ್ಟನ್ ಡಿ.ಕೆ. ಶಮರ್ಾ ತಿಳಿಸಿದ್ದಾರೆ.
ಸಾಗರ ಭದ್ರತಾ ಪಡೆಯ ಮಾಕರ್ೋಸ್ ಕಮಾಂಡೋಗಳನ್ನು ಉರಾನ್ ನೌಕಾ ನೆಲೆಯಲ್ಲಿ ನಿಯೋಜಿಸಲಾಗಿದೆ. ಮುಂಬಯಿ ಪೊಲೀಸರು ನಾಕಾಬಂದಿ ಜಾರಿಗೊಳಿಸಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ತಿಳಿದು ಬಂದಿದೆ. ಕೊಲಾಬಾ ಪೊಲೀಸ್ ದಳ ಕೂಡ ತನ್ನ ಉನ್ನತ ಅಧಿಕಾರಿಗಳನ್ನು ವಿಚಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ.
ಬೆಳಗ್ಗೆ 6 ಗಂಟೆಯ ಹೊತ್ತಿಗೆ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡ ನಾಲ್ಕರಿಂದ ಐದುಜನರಿದ್ದ ಅಪರಿಚಿತ ತಂಡ ಉರಾನ್ ನೌಕಾ ನೆಲೆಯ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು ಎನ್ನಲಾಗಿದೆ. ಆದರೆ ಗುಪ್ತಚರ ದಳದ ಮೂಲಗಳ ಪ್ರಕಾರ ಈ ತನಕ ಅಂತಹ ಯಾವುದೇ ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.
Discussion about this post