ಬೆಂಗಳೂರು: ಅ:8: ಇನ್ನು ಮುಂದೆ ರಾಜ್ಯದ ಎಲ್ಲ ಶಾಲಾಕಾಲೇಜುಗಳಲ್ಲಿ ವಿದ್ಯಾಥರ್ಿಗಳ ಪ್ರವೇಶಾತಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದ್ದು, ಪದವಿಪೂರ್ವ, ಪ್ರೌಢಶಾಲೆ, ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗಲಿದೆ.
2016-17ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆ ಸಕರ್ಾರಿ, ಅನುದಾನ ಹಾಗೂ ಅನುದಾನರಹಿತ ಎಲ್ಲ ಶಾಲಾಕಾಲೇಜುಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಪದವಿಪೂರ್ವ ಶಿಕ್ಷಣ ಮಂಡಳಿ ತೀಮರ್ಾನಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಕಡ್ಡಾಯವಾಗಲಿದೆ.
ಈಗಾಗಲೇ ಈ ಸಂಬಂಧ ಅಧಿಕಾರಿಗಳು ಹಾಗೂ ಕಾಲೇಜು ಶಿಕ್ಷಣ ಆಡಳಿತ ಮಂಡಳಿಗೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಇದಕ್ಕೆ ಬಹುತೇಕರು ಒಪ್ಪಿಗೆ ಸೂಚಿಸಲಾಗಿದೆ.
ಕಾರಣವೇನು:
ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಆಧಾರ್ಕಾಡರ್್ ಕಡ್ಡಾಯಗೊಳಿಸಲು ಮುಖ್ಯ ಕಾರಣವೇನೆಂದರೆ ಪಾರದರ್ಶಕತೆ ಕಾಪಾಡಿಕೊಳ್ಳುವುದಾಗಿದೆ.
ಸಕರ್ಾರ ನೀಡುತ್ತಿರುವ ಸವಲತ್ತುಗಳು ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ. ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಹಾಗೂ ಹೆಚ್ಚು ಅಂಕ ಪಡೆದವರಿಗೆ ಪ್ರೋ ಧನ ನೀಡಲಾಗುತ್ತದೆ.
ಅದರಲ್ಲೂ ವಿದ್ಯಾಥರ್ಿ ವೇತನ ಕೆಲವು ಸಂದರ್ಭಗಳಲ್ಲಿ ಸಿಗಬೇಕಾದವರಿಗೆ ಸಿಗದೆ ಇನ್ಯಾರಿಗೋ ಲಭ್ಯವಾಗುತ್ತಿದೆ. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿರುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.
ಇದಲ್ಲದೆ ವಿದ್ಯಾರ್ಥಿ ನಿಲಯಗಳಲ್ಲಿ ಸುಳ್ಳು ವಿಳಾಸ ನೀಡಿ ಠಿಕ್ಕಾಣಿ ಹೂಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಆಧಾರ್ ಕಡ್ಡಾಯಗೊಳಿಸಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಇನ್ನು ಪ್ರೌಢಶಾಲೆ, ಮಾಧ್ಯಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲೂ ಆಧಾರ್ ಕಾಡರ್್ ಕಡ್ಡಾಯಗೊಳಿಸಲು ಕಾರಣವೆಂದರೆ ಇಲ್ಲಿಯೂ ವಿದ್ಯಾಥರ್ಿಗಳಿಗೆ ನೀಡುತ್ತಿರುವ ಸವಲತ್ತುಗಳು ಬೇರೊಬ್ಬರ ಪಾಲಾಗುತ್ತಿವೆ.
8ನೇ ತರಗತಿಯ ವಿದ್ಯಾರ್ಥಿಗಳಿಗೆ ಸಕರ್ಾರ ಉಚಿತವಾಗಿ ಸೈಕಲ್ ವಿತರಣೆ ಮಾಡುತ್ತಿದೆ. ಮುಚ್ಚುವ ಹಂತದಲ್ಲಿರುವ ಸಕರ್ಾರಿ ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸುವುದರ ಜೊತೆಗೆ ಕೆಲವು ಕಡೆ ಸಾರಿಗೆ ಸೌಲಭ್ಯ ಇಲ್ಲದ ಕಾರಣಕ್ಕಾಗಿ ಸಕರ್ಾರ ಈ ಯೋಜನೆಯನ್ನು ಜಾರಿ ಮಾಡಿತ್ತು.
ಆದರೆ ಇಲ್ಲಿಯೂ ಕೂಡ ಅದೇ ರಾಗ, ಅದೇ ಹಾಡು ಎನ್ನುವಂತಾಗಿದೆ. ಏಕೆಂದರೆ ಸುಳ್ಳು ವಿಳಾಸಗಳನ್ನು ನೀಡಿ ವಿದ್ಯಾರ್ಥಿಗಳ ಹೆಸರಿನಲ್ಲಿ ಕೆಲವರು ಸೈಕಲ್ ಪಡೆಯುವುದು ಇಲ್ಲವೇ ವಿದ್ಯಾರ್ಥಿ ವೇತನವನ್ನು ಕಬಳಿಸುತ್ತಿರುವ ಕಾರಣ ಇದನ್ನು ಕೊನೆಗಾಣಿಸಲು ಈ ದಿಟ್ಟ ಕ್ರಮ ಕೈಗೊಂಡಿದೆ.
Discussion about this post