No Result
View All Result
Silent Skin Damage in Winter: Children at Higher Risk Than Adults, Doctors Warn
English Articles

Silent Skin Damage in Winter: Children at Higher Risk Than Adults, Doctors Warn

by ಕಲ್ಪ ನ್ಯೂಸ್
January 23, 2026
0

Kalpa Media House  |  Bengaluru, Whitefield | Although winter is considered a comfortable season, doctors warn that cold weather can...

Read moreDetails
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
  • Advertise With Us
  • Grievances
  • About Us
  • Contact Us
Sunday, January 25, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಶಿವ ಲಿಂಗ ಮಹಿಮೆ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 30, 2016
in Army
0
Share on FacebookShare on TwitterShare on WhatsApp

ಈ ದೇಶದ ಸಿಂಹಾಸನದಲ್ಲಿ ಪುರಾಣೇತಿಹಾಸಗಳು ಹೇಳುವಂತೆ ಅನೇಕಾನೇಕ ದಾನವರಸರು, ಅನ್ಯ ಮತೀಯ ರಾಜರುಗಳು ಕುಳಿತು ಆಡಳಿತ ಮಾಡಿದ್ದುಂಟು. ಈ categoryಯ ಉಪಾಸನೆಯ ದುರುಪಯೋಗ, ವೇದ ವಿರೋಧ, ಮತ ಸಂಪ್ರದಾಯ ವಿರೋಧಿ ರಾಜರುಗಳೆಲ್ಲ ಮಾಡಿದ ದುರಾಚಾರಗಳೆಂದರೆ- ಭೋಗ, ತಸ್ಕರಣ ( ಇನ್ನೊಬ್ಬನ ಸಂಪತ್ತಿಗೆ ಕನ್ನ ಹಾಕುವುದು)ಮುಂತಾದ ಧರ್ಮವಿರೋಧಿ ಕೆಲಸಗಳಿಗಾಗಿ ಉಪಾಸನೆಯನ್ನು ಮಾಡಿದರು. ಲಾಭವನ್ನೂ ಪಡೆದರು.ಇನ್ನೊಂಡೆ ನಾಶವೂ ಆದರು.

ನಂಬಿ ಕೆಟ್ಟಾಗಲೇ ದ್ವೇಷ ಹುಟ್ಟುವುದು.ಆಗ ದೈವ ದ್ರೋಹಕ್ಕೆ ಮುಂದಾಗುತ್ತಾರೆ.ಕೆಲವರು ಆಲಯಗಳನ್ನು ನಾಶ ಮಾಡಿದರು.ಕೆಲವರು ಇಂತಹ ಉಪಾಸನೆಗಳಿಗೆ ತಪ್ಪು ಅರ್ಥಗಳನ್ನೂ ಪ್ರಚಾರ ಮಾಡಿದರು. ಹಿಂದೆ ಹಿರಣ್ಯಾಕ್ಷನು , ಪಂಚಾಕ್ಷರಿ ಮಂತ್ರ( ಓಂ ನಮಃ ಶಿವಾಯ ), ಷಡಕ್ಷರೀ ಮಂತ್ರ( ಓಂ ನಮೋ ನಾರಾಯಣ) ಗಳೂ ಇರಬಾರದು.ಸಪ್ತಾಕ್ಷರಿ ಮಂತ್ರ ‘ ಓಂ ನಮಃ ಹಿರಣ್ಯಾಯ ‘ ವೇ ಇರಬೇಕು ಎಂದು ಪ್ರಜೆಗಳಿಗೆ ಬಲ ಪೂರ್ವಕವಾಗಿ ಆದೇಶಿಸಿದ.ಯಾಕೆಂದರೆ ದೇವರ ಮೇಲಿನ ಕೋಪವದು.ಆದರೆ ಭಗವಂತನು ಪ್ರಹ್ಲಾದ ರೂಪದಲ್ಲಿ ಹರಿನಾಮ ಉಚ್ಚರಿಸಿ ಹಿರಣ್ಯಾಕ್ಷನ ನಾಶಕ್ಕೆ ಕಾರಣನಾದ.ಇಂತಹ ತಪ್ಪು ತಿಳುವಳಿಕೆ, ನಿಂದನೆಗಳು ಹಿಂದೆಯೂ ಇತ್ತು.ಇಂದಿನ ನಕಲಿ ಪ್ರಗತಿಪರ ವಿಚಾರವಾದಿ ಸಾಹಿತಿಗಳಂತೆ ಆಗಲೂ ಇದ್ದರು. ಇವರ ಮೂಲಕ ನಮ್ಮ ಸಂಪ್ರದಾಯಕ್ಕೆ, ದೇವತಾ ಆರಾಧನೆಗಳಿಗೆ ಧಕ್ಕೆ ಬರುವಂತಹ ಮತ್ತು ಅವಹೇಳನವಾಗುವಂತಹ ಕೆಲಸಗಳನ್ನು ಮಾಡಿಸಿದರು.ಇದು ಇಂದಿಗೂ ಶಾಶ್ವತವಾಗಿ ಉಳಿದಿದೆ.ಇದುವೇ ಈಗ ಮೂಢನಂಬಿಕೆಯಾ ಗಿಯೂ ಕಾಣುತ್ತದೆ. ಆದರೆ ಸಂಸ್ಕೃತದ ಶಬ್ದ ಪ್ರಯೋಗದ ವಿವಿಧ ಅರ್ಥ ಸ್ವರೂಪಗಳನ್ನು ಬದಲಾಯಿಸಲಾಗಲಿಲ್ಲ. ಯಾಕೆಂದರೆ ಇಂತಹ ಒಂದು ಶಬ್ದಕ್ಕೆ ನೂರಾರು ಅರ್ಥಗಳು ಇವೆ.ಇದರ ಪ್ರಯೋಗ ಮಾತ್ರ ಎಲ್ಲಾ ಕಡೆ ಒಂದೇ ಅರ್ಥವನ್ನು ಕೊಡುವುದೂ ಇಲ್ಲ.
ಈಗ ನಾವು ಕೇವಲ ಎರಡು ಶಬ್ದಗಳನ್ನು ಮಾತ್ರ ನೋಡೋಣ. ಲಿಂಗ ಮತ್ತು ಯೋನಿ. ಕಾಮ ಚೇಷ್ಟೆ, ರತಿಕ್ರೀಡಾ ಸಮಯದಲ್ಲಿ ಲಿಂಗ ಎಂದರೆ ಪುರುಷ ಜನನೇಂದ್ರಿಯ ಮತ್ತು ಯೋನಿಗೆ ಸ್ತ್ರೀ ಜನನನೇಂದ್ರಿಯ ಎಂಬ ಅರ್ಥವಿದೆ. ಈ ಅವಹೇಳನ ಮಾಡುವ expert ಸಾಹಿತಿಗಳು ಶಿವ ಲಿಂಗವನ್ನು ಶಿವನ ಗುಪ್ತಾಂಗವಾಗಿಯೂ, ಯೋನಿಯನ್ನು ಸ್ತ್ರೀ ಗುಪ್ತಾಂಗವಾಗಿಯೂ ಹೇಳಿದರು. ಇದು ಸತ್ಯವೂ ಹೌದು.ಆದರೆ ಆರಾಧನೆಯ ವಿಚಾರದಲ್ಲಿ ಈ ಅರ್ಥವು ಅಶ್ಲೀಲವೇ ಆಗಿದೆ. ಏನು ? ಈ ವೈದಿಕರು ದೇವರ ಗುಪ್ತಾಂಗ( ಜನನೇಂದ್ರಿಯ) ಕ್ಕೆ ಪೂಜೆ ಮಾಡಿ ಕೃತಾರ್ಥತೆ,ಅನುಗ್ರಹ ಪಡೆಯುವವರೋ? ಎಂತಹ ಮೂರ್ಖ ಚಿಂತನೆ ನೋಡಿ. ಈ ಬಗ್ಗೆ ಅನೇಕ ವಿದ್ವಾಂಸರುಗಳು ಸೇರಿಕೊಂಡು ಇದೇ ತತ್ವಗಳ ಬಗ್ಗೆ ಗ್ರಂಥಗಳನ್ನೂ ಬರೆದು ಹಾಕಿದ್ದಾರೆ.ಈ ಗ್ರಂಥಗಳನ್ನೋದಿದ ಇಂದಿನ ಅನೇಕ ವಿದ್ವಾಂಸರು, ಪುರೋಹಿತರು, ಹೆಚ್ಚೇಕೆ ಮಠಗಳ ಯತಿಗಳೂ ಸಮರ್ಥನೆ ನೀಡುವುದು ಒಂದು ಅಸಹ್ಯ ವಿಚಾರವಾಗಿದೆ. ಋತು ಎಂದರೆ ರಜಸ್ವಲಾ ಸಮಯವೂ ಆಗುತ್ತದೆ, ಹವಾಮಾನವೂ ಆಗುವುದಿಲ್ಲವೇ.ಹಾಗೆಯೇ ಪ್ರತಿ ಶಬ್ದಗಳಿಗೂ ಬೇರೆ ಬೇರೆ ಅರ್ಥಗಳು ವ್ಯಾಕರಣ ಅನುಸಾರವಾಗಿ, ಸನ್ನಿವೇಶಕ್ಕನುಗುಣವಾಗಿ ಬರುತ್ತದೆ.ಒಂದು ಅರ್ಥವು ಎಲ್ಲಾಕಡೆಗೂ applicable ಆಗಲು ಸಾಧ್ಯವೇ ಇಲ್ಲ.

ಸ್ತ್ರೀ ಪುರುಷ ಸಂಯೋಗ, ತಿನ್ನುವುದು ಉಣ್ಣುವುದು, ಕಜ್ಜಿ ಕಸಲೆಗಳಾದಾಗ ತುರಿಸಿಕೊಳ್ಳುವುದು ಇತ್ಯಾದಿ ಹಲವು ಕೆಲಸಗಳು ಗುರು ಇಲ್ಲದ ಕ್ರಿಯೆ. ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಇದೊಂದು ಮಾನವ ಪ್ರಕೃತಿ. ಇಂತಹ ಉದ್ದೇಶದಿಂದ ಅಂತಹ ಲಾಂಛನಕ್ಕೆ ಪೂಜೆ ಮಾಡುವುದಾಗಿದೆ ಎಂದರೆ ಇದಕ್ಕಿಂತ ಮೂರ್ಖತನ ಬೇರೆ ಇಲ್ಲ.
ಇದನ್ನು ಪ್ರಕೃತಿ ಪುರುಷರ ಆರಾಧನೆ ಎಂದೂ ಕೊಂಡಾಡಿದರು. ಇಂತಹ ಅರ್ಥಗಳನ್ನು ಹೇಳಿಕೊಂಡೇ ನಾವು ಅವಮಾನಿತರಾಗುವುದು. ಅಥವಾ ನಮ್ಮನ್ನು ನಾವೇ ಅವಮಾನಿಸಿಕೊಳ್ಳುವು ದಾಗಿದೆ. ಆದರೆ ದೇವತಾ ಆರಾಧನೆಯ ವಿಚಾರದಲ್ಲಿ ಇದರ ಅರ್ಥವು ಇನ್ನೊಂದು ರೂಪದಲ್ಲಿ ಇರುವುದು ಅನೇಕರಿಗೆ ತಿಳಿದಿಲ್ಲ.
ಲಿಂಗ ಎಂದರೆ ಗುರುತು,ಚಿಹ್ನೆ, ಪ್ರಭೆ ಮುಂತಾದ ಅರ್ಥಗಳೂ ಇವೆ.
ಯೋನಿ ಎಂದರೆ ಮೂಲ,ಜಲ,ಸ್ಥಾನ,ಕಾರಣ ಗಳೆಂಬ ಅರ್ಥಗಳೂ ಇವೆ.
ಬೃಗು ಋಷಿಗಳು ಶಾಪ ನೀಡುತ್ತಾ ಬಂದ ವಿಚಾರ ಎಲ್ಲರಿಗೂ ತಿಳಿದಿದೆ.ಆ ಶಾಪಗಳನ್ನು ಪಡೆದವರಲ್ಲಿ ಶಿವನೂ ಒಬ್ಬ.( ಇದು ಹೌದೋ ಅಲ್ಲವೋ ದೇವನೇ ಬಲ್ಲ.ಆದರೆ ಇದರೊಳಗೆ ಒಂದು ತತ್ವವಡಗಿದೆ) ಈಶ್ವರನು ಪತ್ನಿಯ ಜತೆಗಿದ್ದಾಗ ಬೃಗು ಋಷಿಗಳನ್ನು ನಿರ್ಲಕ್ಷ( ignore) ಮಾಡಿದಾಗ ಕೋಪಗೊಂಡ ಋಷಿ ‘ ನಿನ್ನ ಲಿಂಗಕ್ಕೆ ಭಕ್ತರು ಪೂಜೆ ಮಾಡುವಂತಾಗಲಿ’ ಎಂದು ಶಾಪ ಕೊಡುತ್ತಾರೆ. ಇದರ ಪರಿಣಾಮವಾಗಿ ಇಂದಿಗೂ ಶಿವನ ಲಿಂಗಕ್ಕೆ ಪೂಜೆ ನಡೆಯುತ್ತದೆ.ಅಂದರೆ ಅಪಾರ್ಥದ ಪ್ರಕಾರ ಶಿವನ ಶಿಶ್ನಕ್ಕೆ ಪೂಜೆ ಎಂದಾಯಿತು.
ಇಲ್ಲಿ ಲಿಂಗ ಎಂದರೆ ಪ್ರಭಾವಳಿಯಾಗುತ್ತದೆ. ಹಾಗಾಗಿಯೇ ಕೆಲ ವ್ಯಕ್ತಿಗಳ ಮರಣವನ್ನು ‘ ಲಿಂಗ ಐಕ್ಯಯ‌‌‍‌‍ರಾದರು’ ಎನ್ನುತ್ತೇವೆ.ಅಂದರೆ ಶಿವನ ಕಾಂತೀಯ ಪ್ರಭೆಯೊಳಗೆ ಇವರ ಆತ್ಮಜ್ಯೋತಿ ಲೀನವಾಯಿತು ಎಂದರ್ಥ. ಈ ಲಿಂಗ ರೂಪವನ್ನಿಟ್ಟು ಅಭಿಷೇಕ ಪೂಜಾದಿಗಳನ್ನು ಮಾಡಲು ಪೀಠ ಬೇಕು.ಆ ಪೀಠದ ರಚನೆ ಯೋನಿಗೆ ಸಾಮ್ಯತೆ ಇದ್ದರೂ ಅದು ಸ್ತ್ರೀ ಜನನಾಂಗದ ಪ್ರತಿರೂಪವೇನಲ್ಲ. ಅದೊಂದು ಪೀಠ ವ್ಯವಸ್ಥೆಯೇ ಆಗಿದೆ. ಅದರಲ್ಲಿ ಶಿವನ ಪ್ರಭೆಯ ಸ್ವರೂಪವನ್ನಿಟ್ಟು ಪೂಜಿಸಲಾಯಿತು.ಒಂದು ವೇಳೆ ಅದು ಪುರುಷ ಜನನಾಂದ ಪ್ರತಿಸ್ವರೂಪವೇ ಆಗಿದ್ದಿದ್ದರೆ ಎಷ್ಟೋ ದುರ್ಗಾ ದೇವಸ್ಥಾನ, ಇನ್ನಿತರ ಸ್ತ್ರೀ ಶಕ್ತಿ ದೇವಸ್ಥಾನಗಳಲ್ಲಿ ಲಿಂಗವೇ ಪ್ರಧಾನ ಸಾನ್ನಿಧ್ಯವಾಗಿರುವುದು ಅಸಂಭದ್ಧವಾಗುತ್ತದೆ.ಇದು ಅರ್ಥ ಕೊಡುತ್ತದೆಯೇ? ಹಾಗೆಯೇ ಗಣಪತಿ, ಸುಬ್ರಹ್ಮಣ್ಯಾದಿ ದೇವಸ್ಥಾನಗಳಲ್ಲೂ ಲಿಂಗ ಸ್ವರೂಪಗಳಿವೆ. ಅಂದರೆ ರೂಪ ಕಲ್ಪನೆಗಿಂತ ಕಾಂತ ಕಿರಣಗಳ ಪ್ರಭೆಯ ಕಲ್ಪನೆಗೆ ಬಹಳ ಮಹತ್ವ ನೀಡಿದ್ದರು. ಈ ಲಿಂಗಕ್ಕೆ ನೇತ್ರ,ನಾಮಗಳನ್ನೂ ಇಟ್ಟು ಪೂಜಿಸುತ್ತಾರೆ ಎಂದ ಮೇಲೆ ಇದು ದೇವರ ಪ್ರಭಾವಳಿಯೇ ಆಗುತ್ತದೆ. ಶಿವ ಎಂದರೆ ಪ್ರದ್ಯುಮ್ನ ( ರಾಜಸ) ಮತ್ತು ಸಂಕರ್ಷಣಾ( ಆಕರ್ಷಣೆ) ಶಕ್ತಿ ಸಂಕೇತ.ಶಿವ ಎಂದರೆ ಮಂಗಲ ಕಾರಕ.’ ಓಂ ನಮಃ ಶಿವಾಯ ‘ ಎಂಬ ಪಂಚಾಕ್ಷರಿ ಮಂತ್ರವು ‘ ಮಂಗಲಕರವಾದುದಕ್ಕೆ ಪ್ರಣಾಮಗಳು’ ಎಂದರ್ಥವಾಗುತ್ತದೆ‌ .
ಕೆಲವೆಡೆ ಮೂರ್ತಿಗಳೂ ಇವೆ. ಇದು ಅವರವರ ಭಾವಕ್ಕೆ ಬಿಟ್ಟದ್ದು. ಅಂತೂ ಶಿವನ ಸ್ವರೂಪವು ಅಘಾದ.ಶಿವಪಾರ್ವತಿಯರನ್ನು ‘ ಜಗತಃ ಪಿತರೌ ಪಾರ್ವತೀ ಪರಮೇಶ್ವರೌ ‘ ಎಂದಿದ್ದಾರೆ. ಇದು ವಿಷ್ಣು ( ಮಹಾ ಚೈತನ್ಯದ) ರಾಜಸಗುಣ ಮತ್ತು ಭೂಶಕ್ತಿಯ ಸ್ವರೂಪ. ಶಿವನಿಗೆ ಲಯಕಾರಕ ಎಂದರು.ಲಯ ಎಂದರೆ ಸಾವೂ ಆಗುತ್ತದೆ ಅಲ್ಲದೆ ದೋಷ ನಿಗ್ರಹವೂ ಆಗುತ್ತದೆ.ನಮ್ಮೊಳಗಿನ ದೋಷಗಳನ್ನು ನಿಗ್ರಹಿಸಲು, ಧಮನಿಸಲು ಶಿವನ ಅನುಗ್ರಹ ಬೇಕು.ದೋಷ ನಿಗ್ರಹವಾದರೆ ವಿಷ್ಣು ಪದ( ಮೋಕ್ಷ) ಸಿಗುತ್ತದೆ.‌

Share196Tweet123Send
Previous Post

ಗಂಗಾ ನದಿ ಸ್ವಚ್ಛತೆಗೆ 550ಕಿಮೀ ಈಜಿದ ಶ್ರದ್ಧಾಶುಕ್ಲ!

Next Post

ಭಾರೀ ಮಳೆಗೆ ಹಿಮಾಚಲ ಪ್ರದೇಶದಲ್ಲಿ ಸೇತುವೆ ಕುಸಿತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಾರೀ ಮಳೆಗೆ ಹಿಮಾಚಲ ಪ್ರದೇಶದಲ್ಲಿ ಸೇತುವೆ ಕುಸಿತ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಭದ್ರಾವತಿ | ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಹೇಗೆ? ಘಟನೆ ನಡೆದಿದ್ದು ಹೇಗೆ?

ಭದ್ರಾವತಿ | ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಹೇಗೆ? ಘಟನೆ ನಡೆದಿದ್ದು ಹೇಗೆ?

January 19, 2026
ಅಕ್ಷರ ಕಲಿಕೆಯಷ್ಟೇ ಚಿತ್ರಕಲೆಗೂ ಆದ್ಯತೆ ನೀಡಿ: ಸಚಿವ ಮಧು ಬಂಗಾರಪ್ಪ

ಅಕ್ಷರ ಕಲಿಕೆಯಷ್ಟೇ ಚಿತ್ರಕಲೆಗೂ ಆದ್ಯತೆ ನೀಡಿ: ಸಚಿವ ಮಧು ಬಂಗಾರಪ್ಪ

January 24, 2026
ಮಕ್ಕಳ ಮೇಲೆ ಒತ್ತಡ ಹೇರದೆ ಸಂತೋಷದ ವಾತಾವರಣ ರೂಪಿಸಿ: ರೆ. ಫಾ. ಕೆನ್ಯೂಟ್ ಬರ್ಬೋಜ

ಮಕ್ಕಳ ಮೇಲೆ ಒತ್ತಡ ಹೇರದೆ ಸಂತೋಷದ ವಾತಾವರಣ ರೂಪಿಸಿ: ರೆ. ಫಾ. ಕೆನ್ಯೂಟ್ ಬರ್ಬೋಜ

January 24, 2026
ಜಾಗೃತಿ ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆ ಆಯೋಜನೆ ಶ್ಲಾಘನೀಯ: ಕಮಲಾ ಗುಮಾಸ್ತೆ

ಜಾಗೃತಿ ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆ ಆಯೋಜನೆ ಶ್ಲಾಘನೀಯ: ಕಮಲಾ ಗುಮಾಸ್ತೆ

January 24, 2026
ರಾಜವಂದ್ಯತೀರ್ಥರು ವೇದಾಂತ ಸಾಮ್ರಾಜ್ಯದಲ್ಲಿ ವಿಶ್ವವಂದ್ಯರು

ರಾಜವಂದ್ಯತೀರ್ಥರು ವೇದಾಂತ ಸಾಮ್ರಾಜ್ಯದಲ್ಲಿ ವಿಶ್ವವಂದ್ಯರು

January 24, 2026
ನಮ್ಮೆಲ್ಲರ ಭವಿಷ್ಯ ಹೂವಿನಂತೆ ಅರಳಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

ನಮ್ಮೆಲ್ಲರ ಭವಿಷ್ಯ ಹೂವಿನಂತೆ ಅರಳಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

January 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL