Read - < 1 minute
ಹೊಸದಿಲ್ಲಿ: ಎಫ್ಎಆರ್ಸಿ ನಾಯಕತ್ವ ಹಾಗೂ ಕೊಲಂಬಿಯಾದ ಅಧ್ಯಕ್ಷರ ಆಹ್ವಾನದ ಹಿನ್ನಲೆಯಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಎಫ್ಎಆರ್ಸಿ ಹಾಗೂ ಕೊಲಂಬಿಯ ಸರ್ಕಾರದ ನಡುವೆ ನಡೆಯಲಿರುವ ಶಾಂತಿ ಒಪ್ಪಂದದ ಸಹಿ ಹಾಕುವ ಸಮಾರಂಭಕ್ಕೆ ಕೊಲಂಬಿಯಾದ ಕಾರ್ಟಜೀನ ಡಿ ಇಂಡಿಯಾಸ್ಗೆ ತೆರಳಲಿದ್ದಾರೆ. ಜಗತ್ತಿನ ಎಲ್ಲೆಡೆಯಿಂದ, 15 ದೇಶಗಳಿಂದ ದೇಶದ ಅಧಿಪತಿಗಳು ಸೆ. 26ರಂದು ನಡೆಯಲಿರುವ ಈ ಸಮಾರಂಭದಲ್ಲಿ ಉಪಸ್ಥಿತರಾಗಿರುವ ನಿರೀಕ್ಷೆಯಿದೆ. ಪಶ್ಚಿಮಾತ್ಯದಿಂದ ಉಪಸ್ಥಿತರಾಗಲಿರುವ ಏಕೈಕ ಆಧ್ಯಾತ್ಮಿಕ ನಾಯಕ ಶ್ರೀ ಶ್ರೀ ಆಗಿದ್ದಾರೆ.
ಕೊಲಂಬಿಯಾದ ಅಧ್ಯಕ್ಷರಾದ ಜುಆನ್ ಮಾನ್ಯುಯೆಲ್ ಸಾಂಟ್ರೋಸ್ರವರೂ ಶಾಂತಿ ಪ್ರಕ್ರಿಯೆಯಲ್ಲಿ ಶ್ರೀ ಶ್ರೀಯವರ ಪಾತ್ರವನ್ನು ಮೆಚ್ಚಿ, ಶ್ರೀ ಶ್ರೀ ರವಿಶಂಕರರು ಮತ್ತು ಆರ್ಟ್ ಆಫ್ ಲಿವಿಂಗ್ ಶಾಂತಿ ಪ್ರಕ್ರಿಯೆಯ ನಾಯಕರು ಎಂಬುದಾಗಿ ಘೋಷಿಸಿದ್ದಾರೆ.
Discussion about this post