Read - < 1 minute
ನವದೆಹಲಿ: ಸೆ:30: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡುಗು ತಾಣಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಸಂಯಮದಿಂದ ವರ್ಥಿಸುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸಲಹೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ , ಸೇನಾ ಕಾರ್ಯಾಚರಣೆ ಬದಲು ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಉಭಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಭಾರತದ ಗಡಿಯಲ್ಲಿ ನಡೆಯುವ ಭಯೋತ್ಪಾದನೆ ಬಗ್ಗೆ ನಮಗೂ ಅರಿವಿದೆ. ಭಯೋತ್ಪಾದನೆಗೆ ಗಡಿಯಿಲ್ಲ. ಸೆ. 27ರಂದು ವಿದೇಶಾಂಗ ಸಚಿವಾಲಯದ ಜೊತೆ ಮಾತುಕತೆ ನಡೆಸಿದ್ದು, ಸೆ. 18ರಂದು ಉರಿ ಸೆಕ್ಟರ್ನಲ್ಲಿ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಹೀಗಾಗಿ ಪದೇ ಪದೆ ದಾಳಿ ಮಾಡುವ ಬದಲು ಉಭಯ ರಾಷ್ಟ್ರಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಜಾನ್ ಕೆರಿ ಹೇಳಿದ್ದಾರೆ.
ಅಮೆರಿಕ ಸಹ ಎಲ್ಇಟಿ ಮತ್ತು ಜೈಶ್ -ಎ- ಮೊಹಮ್ಮದ್ ಮುಜಾಹಿದ್ದೀನ್ ಇ ತಾಂಝೀಮ್ ನಂತರ ಭಯೋತ್ಪಾದನೆ ಸಂಘಟನೆಗಳನ್ನು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
Discussion about this post