ನವದೆಹಲಿ, ಅ.3: ಸರಣಿ ಹಂತಕ ಬಿಎ ಉಮೇಶ್ ರೆಡ್ಡಿಗೆ ಸುಪ್ರೀಂಕೋರ್ಟ್ ವಿಸಿರುವ ಮರಣದಂಡನೆ ಮರು ಪರಿಶೀಲನೆಗಾಗಿ ರೆಡ್ಡಿ ಸಲ್ಲಿಸಿದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ವಜಾಗೊಳಿಸಿದೆ. ತನ್ಮೂಲಕ ಮರಣದಂಡನೆಯನ್ನು ಸುಪ್ರೀಂಕೋರ್ಟ್ ದೃಢಪಡಿಸುತ್ತದೆ.
ಬೆಂಗಳೂರು ನಿವಾಸಿ ಉಮೇಶ್ ರೆಡ್ಡಿಗೆ ಸಲ್ಲಿಸಿದ್ದ ಮರು ಪರಿಶೀಲನೆ ಅರ್ಜಿ 2012ರಲ್ಲೇ ವಜಾವಾಗಿದ್ದು ತೀರ್ಪಿನ ಆಶಾಕಿರಣ ಅಷ್ಟೇ ಉಳಿದಿತ್ತು. ಮಾಜಿ ಪೊಲೀಸ್ ಕಾನ್ಸ್ಟೇಬಲ್ ರೆಡ್ಡಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. 2009 ಫೆ.18ರಂದು ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಮರಣದಂಡನೆ ವಿಸಿ ತೀರ್ಪು ನೀಡಿತ್ತು.
Discussion about this post