Read - < 1 minute
ಬೆಂಗಳೂರು: ಸೆ:10: ನಾನು ಹುಟ್ಟಿದ್ದು ಆಂಧ್ರದಲ್ಲಾದರೂ ಕನರ್ಾಟಕ ನನಗೆ ಎರಡನೇ ತವರುಮನೆ. ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ ನನಗೆ ಸಿಕ್ಕಿದ್ದು ನಿಜ್ಕಕೂ ಸಂತಸ ತಂದಿದೆ. ಅದರಲ್ಲು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಸಿಕ್ಕಿದ್ದು ಖುಷಿಯಾಗಿದೆ ಎಂದು ಹೇಳಿದ ನಟಿ ಜಯಪ್ರದಾ ಸಿಎಂ ಸಿದ್ದರಾಮಯ್ಯ ಡೈನಾಮಿಕ್ ಎಂದು ಶ್ಲಾಘಿಸಿದರು.
ಕನ್ನಡಿಗರು, ತೆಲುಗರನ್ನೊಳಗೊಂಡ ಸಾಮ್ರಾಜ್ಯ ಶ್ರೀಕೃಷ್ಣದೇವರಾಯನ ಸಾಮ್ರಾಜ್ಯವಾಗಿತ್ತು. ಕೃಷ್ಣದೇವರಾಯ ಸಿನೆಮಾ ಮೊದಲು ತಯಾರಾಗಿದ್ದು ತೆಲುಗಿನಲ್ಲಿ, ಕೃಷ್ಣದೇವರಾಯ ವಿವಿ ಸ್ಥಾಪನೆಯಾಗಿದ್ದು ಆಂಧ್ರದಲ್ಲಿ. ಆಮೇಲೆ ಸಿನೆಮಾ ಮತ್ತು ವಿವಿ ಕನರ್ಾಟಕದಲ್ಲಿ ಸ್ಥಾಪನೆಯಾದವು. ಒಬ್ಬ ಸಾಮ್ರಾಟನ ಹೆಸರಲ್ಲಿ ವಿವಿ, ಸಿನೆಮಾ ಎರಡು ಭಾಷೆಯಲ್ಲಿಯಾಗಿದ್ದು ಕೃಷ್ಣದೇವರಾಯನದ್ದು. ಕನ್ನಡಿಗರು ಮತ್ತು ತೆಲುಗರು ಯಾವತ್ತೂ ನೀರಿಗಾಗಿ ಕಿತ್ತಾಡಿಲ್ಲ. ಆದ್ರೆ, ತಮಿಳುನಾಡಿನ ನೀತಿಯಿಂದಾಗಿ ಇಂದು ಒಕ್ಕೂಟ ವ್ಯವಸ್ಥೆ ತಿಕ್ಕಾಟ ವ್ಯವಸ್ಥೆಯಾಗಿದೆ. ಕುಡಿಯುವ ನೀರಿಗೂ ರಾಜಕೀಯ ಶುರುವಾಗಿರೋದು ಶೋಚನೀಯ. ಬದುಕಿ, ಬದುಕಲು ಬಿಡಿ ಅಂತಾ ನ್ಯಾಯಾಲಯ ಹೇಳುವ ಮೂಲಕ ಮುಂದಿನ ತೀಪರ್ಿನ ಬಗ್ಗೆ ಸುಳಿವು ನೀಡಿತ್ತು. ಒಬ್ಬ ನ್ಯಾಯಾಧೀಶ ಕನ್ನಡ ಓದಿದ್ರೆ ಬಾಚಿಯೊಳಗಿನ ಕಪ್ಪೆಯಾಗ್ತಾರೆ ಅಂತಾ ಹೇಳ್ತಾರೆ. ಅದು ತೆಲುಗಿಗೂ ಸಂಬಂಧ ಪಡುತ್ತೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಇದೇ ವೇಳೆ ಅಗ್ನಿ ಐಪಿಎಸ್ ಸಿನೆಮಾ ಡೈಲಾಗ್ ಹೇಳಿದ ಸಾಯಿಕುಮಾರ್. ಹುಟ್ಟಿದ್ದು ಆಂಧ್ರ ಆದ್ರೂ ಕನರ್ಾಟಕದಲ್ಲೇ ನನ್ನ ಜೀವನ ಆರಂಭವಾಗಿದ್ದು. ನಾನು ಅಂದು ಪೊಲಿಸ್ ಪಾತ್ರ ಮಾಡಿದ್ದರಿಂದಲೇ ಇಂದು ಈ ಸ್ಥಾನಕ್ಕೆ ಬಂದು ನಿಂತಿದ್ದೀನಿ ಎಂದು ಹೇಳಿದರು.
Discussion about this post