Read - < 1 minute
ನವದೆಹಲಿ, ಅ.19: ಭಾರತೀಯ ಸೇನೆ ಈ ಹಿಂದೆ ತನ್ನು ಗುರಿಯನ್ನ ಸಾಧಿಸುವುದಕ್ಕಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗಿದೆ. ಆದರೆ ಸೆ.29ರಂದು ಮೊಟ್ಟ ಮೊದಲ ಬಾರಿಗೆ ಪಾಕಿಸ್ಥಾನ ಗಡಿಯೊಳಕ್ಕೆ ನುಗ್ಗಿ ಉಗ್ರ ಶಿಬಿರಗಳನ್ನು ನಾಶಮಾಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ ಸಮಿತಿಗೆ ಹೇಳಿದೆ.
ಮಂಗಳವಾರ ಕಾಂಗ್ರೆಸ್ನ ಸತ್ಯವೃತ ಚತುರ್ವೇದಿ ಅವರ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಎಸ್. ಜೈಶಂಕರ್, ಉರಿ ದಾಳಿ ಹಿನ್ನೆಲೆಯಲ್ಲಿ ನಮ್ಮ ಸೇನೆ ಸೀಮಿತ ಗುರಿ ದಾಳಿ ನಡೆಸಿತು. ಸೇನೆ ಈ ಹಿಂದೆ ಗಡಿ ನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿದ ರೀತಿ ನಡೆಸಿದಕ್ಕಿಂತಲೂ ಈ ಸೀಮಿತ ದಾಳಿ ವಿಭಿನ್ನವಾಗಿತ್ತು. ಈ ಹಿಂದೆ ಭಾರತೀಯ ಸೇನೆ ದಾಳಿ ಮಾಡಿರುವುದನ್ನು ಬಹಿರಂಗಪಡಿಸಲಿಲ್ಲ ಎಂದು ಹೇಳಿದ್ದಾರೆ.
Discussion about this post