ಮುಂಬೈ, ಸೆ.6: ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಇಂದು ತನ್ನ ವಹಿವಾಟನ್ನು 445.91 ಅಂಕಗಳ ಭಾರೀ ಏರಿಕೆಯೊಂದಿಗೆ 28,978.02 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ಸುಮಾರು 17 ತಿಂಗಳ ಬಳಿಕ ಸೆನ್ಸೆಕ್ಸ್ ದಾಖಲೆ ಅಂಕಗಳ ಏರಿಕೆ ಕಂಡಿದೆ.
ಬ್ಯಾಂಕಿಂಗ್, ಆಟೋ ಮತ್ತು ಗ್ರಾಹಕ ವಸ್ತುಗಳ ಶೇರುಗಳು ಭರ್ಜರಿ ಖರೀದಿಯನ್ನು ಕಂಡ ಹಿನ್ನಲೆಯಲ್ಲಿ ಇಂದು ಮುಂಬಯಿ ಶೇರು ಪೇಟೆ 29,000 ಅಂಕಗಳ ದಾಖಲೆಯ ಗಡಿಯನ್ನು ದಾಟಿದೆ.
ಇಂದು 445.91 ಅಂಕ ಏರಿಕೆಯನ್ನು ಸಾಧಿಸುವ ಮೂಲಕ 29,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್ ಕಳೆದ 2015ರ ಎಪ್ರಿಲ್ 15ರ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಏಕದಿನ ಗಳಿಕೆಯನ್ನು ದಾಖಲಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 133.35 ಅಂಕಗಳ ಉತ್ತಮ ಏರಿಕೆಯನ್ನು ಕಂಡಿದ್ದು, 8,943.00 ಅಂಕಗಳ ಗಡಿ ತಲುಪಿದೆ.
ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಏಶ್ಯನ್ ಪೇಂಟ್ಸ್ ಮತ್ತು ಟಾಟಾ ಸ್ಟೀಲ್ ಟಾಪ್ ಗೇನರ್ ಎನಿಸಕೊಂಡವು. ಟಿಸಿಎಸ್, ಕೋಲ್ ಇಂಡಿಯಾ, ವಿಪ್ರೋ, ಸನ್ ಫಾರ್ಮಾ ಮತ್ತು ಐಟಿಸಿ ಟಾಪ್ ಲೂಸರ್ ಎನಿಸಿಕೊಂಡವು.
Discussion about this post