Read - < 1 minute
ಹುಬ್ಬಳ್ಳಿ, ಅ.5: ಪಾಕಿಸ್ಥಾನ ಸೈನಿಕರನ್ನು ಹಿಮ್ಮೆಟ್ಟಿದ ಭಾರತೀಯ ಸೈನಿಕರಿಗೆ ಜಗತ್ತೇ ಜೈಕಾರ ಹಾಕುತ್ತಿರುವಾಗ ಕಾಂಗ್ರೆಸ್ ಸರ್ಕಾರದ ನಾಯಕರು, ಉಡಾಫೆ ಪ್ರಚಾರಕ್ಕೆ ಮುಂದಾಗಿರುವುದು ಕಾಂಗ್ರೆಸ್ ನ ಮೂರ್ಖತನದ ಪರಮಾವದಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದೇಶಭಕ್ತಿಯಲ್ಲಿ ಯುವಕರ ಪಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದೇ ಪದೇ ಕಾಲು ಕೇದರಿ ಗಡಿ ತಂಟೆಗೆ ಬರುವ ಪಾಕಿಸ್ಥಾನಕ್ಕೆ ಮೋದಿ ಸರ್ಕಾರ ಪ್ರತ್ಯುತ್ತರ ನೀಡಿದೆ. ಭಾರತೀಯ ಸೈನಿಕರ ದಿಟ್ಟ ಹೋರಾಟಕ್ಕೆ ಅಭಿನಂದನೆ ಸಲ್ಲಿಸದ ಅವರು, ಪಾಕಿಸ್ಥಾನದ ಸುಳ್ಳು ವದಂತಿಗೆ ಸಾಕ್ಷಾಧಾರ ಕೇಳುತ್ತಿರುವುದು ನಾಚಿಕೇಡಿನ ಸಂಗತಿಯಾಗಿದೆ ಎಂದು ಲೇವಡಿಯಾಡಿದರು.
ಕಾವೇರಿ ನ್ಯಾಯಾಧೀಕರಣ ಪೀಠದ ಮುಖ್ಯಸ್ಥರನ್ನಾಗಿ ತ್ರಿವಳಿ ಪಕ್ಷಗಳು ಒಕ್ಕೊರಲನಿಂದ ಸಂಸತ್ತಿನಲ್ಲಿ ವಕೀಲ ನಾರಿಮನ್ ಅವರನ್ನು ಮುಂದುವರೆಯುವಂತೆ ನಿರ್ಣಯಿಸಿದ್ದನ್ನು ಬಿಜೆಪಿ ಸ್ವಾಗತಿಸುತ್ತಿದೆ. ಕಾವೇರಿಗಾಗಿ ಸರ್ವಪಕ್ಷದ ನಾಯಕರು ನಾರಿಮನ್ ಅವರನ್ನು ಸಮರ್ಥಸಿಕೊಂಡು ಮುಂದಿನ ಅವಗೆ ಕಾವೇರಿ ವಿವಾಧದಲ್ಲಿ ರಾಜ್ಯಕ್ಕೆ ಜಯ ಲಭಿಸಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪರಮಾವಗೆ ಕೊನೆಯಾಗಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ಣಾಮವಾಗಲಿದೆ ಎಂದು ಭವಿಷ್ಯ ನುಡಿದರು.
Discussion about this post