Read - 3 minutes
ಇತಿಹಾಸ ಮರುಕಳಿಸಿದೆ. ತಾಯಿ ಭಾರತಾಂಬೆಗೆ ಸಂಕಟ ಬಂದಾಗಲೆಲ್ಲಾ ಅದನ್ನು ಪರಿಹಾರ ಮಾಡಲು ಓರ್ವ ವ್ಯಕ್ತಿ ನಾಯಕನಾಗಿ ಉದಯಿಸುತ್ತಾನೆ, ಸಂಕಟದಲ್ಲಿರುವ ಮಾತೆಯನ್ನು ದುಷ್ಟರಿಂದ ಪಾರು ಮಾಡಿ, ಶತ್ರುಗಳ ಗುಂಡಿಗೆಯನ್ನು ಸೀಳುತ್ತಾನೆ. ಅಂತಹ 56 ಇಂಚಿನ ಎದೆಯ ನಾಯಕ ನಮ್ಮ ದೇಶವನ್ನು ಮುನ್ನಡೆಸಲು ನಿಂತಂದಿನಿಂದ ದೇಶ ಬದಲಾಗುತ್ತಾ ಹೋಯಿತು.
ಇಂದು ದೇಶದ ಪ್ರಧಾನಿ ಮಾತ್ರ 56 ಇಂಚಿನ ಎದೆಯವರಲ್ಲ, ಇಡಿಯ ಭಾರತ ದೇಶವೇ 56 ಇಂಚು ಎದೆಯಿಂದ ಹೆಮ್ಮೆಯಿಂದ ನಿಲ್ಲುವಂತಹ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ಹೆಮ್ಮೆಯ ವಾಸ್ತವ ಕರ್ತೃ, ಕರ್ಮ, ಕ್ರಿಯೆಯಾಗಿ ಹೋರಾಡಿದ ಪ್ರತಿಯೊಬ್ಬ ಭಾರತೀಯ ಯೋಧರಿಗೆ ಇಡಿಯ ದೇಶವೇ ಇಂದು ತಲೆಬಾಗಬೇಕಿದೆ.
ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ಸೇನೆ ಹಾಗೂ ಪಾಕ್ ಸೇನೆ ಪ್ರಾಯೋಜಿತ ಉಗ್ರರ ಉಪಟಳ ಮಿತಿ ಮೀರಿತ್ತು. ಗಡಿಯಲ್ಲಿ ಮೇಲಿಂದ ಮೇಲೆ ಕಾಲು ಕೆರೆದುಕೊಂಡು ಅಪ್ರಚೋದಿತ ದಾಳಿಯನ್ನು ನಡೆಸುತ್ತಿದ್ದ ಪಾಕಿಸ್ಥಾನ, ಉರಿ ಸೆಕ್ಟರ್‌ನಲ್ಲಿ ಮಲಗಿದ್ದ ಯೋಧರ ಮೇಲೆ ಗ್ರೆನೇಡ್ ಎಸೆದು ಯೋಧರನ್ನು ಹತ್ಯೆ ಮಾಡಿತೋ… ಇನ್ನು ತಾಳ್ಮೆ ಸಲ್ಲ… ಆ ವೇಳೆ ಎದ್ದು ನಿಂತಿದ್ದು ಮೋದಿ ನೇತೃತ್ವದ ಭಾರತ ಸರ್ಕಾರ ಹಾಗೂ ಇದನ್ನು ಸಾಕಾರಗೊಳಿಸಿದ್ದು ಭಾರತದ ಹೆಮ್ಮೆಯ ಯೋಧರು.
ಉರಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆದ ನಂತರ ತಾಳ್ಮೆ ಕಳೆದುಕೊಳ್ಳದ ಮೋದಿ ಸರ್ಕಾರ ಅತ್ಯುತ್ತಮ ರಾಜತಾಂತ್ರಿಕ ನಡೆಯನ್ನು ಇಟ್ಟಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಮಾತನ್ನು ಕೇಳಿಬರದಂತಹ ಸೂಕ್ಷ್ಮತೆಯನ್ನು ವಹಿಸಿ, ಅಂತಿಮವಾಗಿ ಪಾಕ್ ಗಡಿಯೊಳಗೆ ಸೇನೆಯನ್ನು ನುಗ್ಗಿಸಿ, ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿತು. ಸರ್ಕಾರ ದಾಳಿ ನಡೆಸಿ ಎಂದು ಆದೇಶ ನೀಡಿದ ಕೂಡಲೇ ಜೀವವನ್ನೂ ಲೆಕ್ಕಿಸದೇ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ವ್ಯವಸ್ಥಿತವಾಗಿ ಸುತ್ತುವರಿದು, ಅಕ್ಷರಶಃ ಅಟ್ಟಾಡಿಸಿ ಕೊಂದಿದ್ದಾರೆ ನಮ್ಮ ಭಾರತೀಯ ಯೋಧರು ಎಂದರೆ, ನಮ್ಮ ಮಣ್ಣಿನ ಪರಾಕ್ರಮ ಗುಣ ಇನ್ನೆಂತಹುದ್ದಿರಬೇಕು. ಇದನ್ನು ಸಾಕ್ಷೀ ಕರಿಸುವುದು ನಿನ್ನೆ ನಡೆದ ದಾಳಿಯಲ್ಲಿ ಭಾರತೀಯ ಸೇನೆಯ ಒಬ್ಬನೇ ಒಬ್ಬ ಯೋಧನನ್ನು ನಾವು ಕಳೆದುಕೊಂಡಿಲ್ಲ ಎನ್ನುವುದು.
ಭಾರತೀಯರೇ ಹಾಗೇ… ಯಾರ ಮೇಲೂ ದಂಡೆತ್ತಿ ಹೋಗುವುದಿಲ್ಲ. ಆದರೇ, ವೃಥಾ ಕಾಲುಕೆರೆದುಕೊಂಡು ಕೆಣಕಿದರೆ ಸುಮ್ಮನೆ ಬಿಡುವ ಪ್ರಸಂಗವೇ ನಮ್ಮಲ್ಲಿಲ್ಲ. ಮೋದಿ ಪ್ರಧಾನಿಯಾದ ನಂತರ ಪಾಕ್‌ನೊಂದಿಗೆ ಶಾಂತಿ ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಆದರೆ, ಇದನ್ನೇ ನಮ್ಮ ದೌರ್ಬಲ್ಯ ಎಂದು ತಿಳಿದ ಪಾಕ್ ಆಕ್ರಮಣಗಳ ಮೇಲೆ ಆಕ್ರಮಣ ಮಾಡಿತು. ಇನ್ನು ಸುಮ್ಮನೆ ಕೂರಲು ಈಗೇನು ದೇಶದಲ್ಲಿ ಹೆಂಗಸರ ಸರ್ಕಾರವಿಲ್ಲ. ಈಗಿರುವುದು ಭಾರತಾಂಬೆಯ ಸೇವೆಗಾಗಿ ತನ್ನನ್ನೇ ಸಮರ್ಪಿಸಿಕೊಂಡಿರುವ ಮೋದಿ ನೇತೃತ್ವದ ಗಂಡು ಸರ್ಕಾರ.
ಪರಿಣಾಮ ಮಲಗಿದ್ದ ಸಿಂಹವನ್ನು ಬಡಿದೆಬ್ಬಿಸಿದ ಪಾಕ್‌ನ ನರಿಗಳನ್ನು ಭಾರತೀಯ ಪುರುಷ ಸಿಂಹಗಳು ಅಟ್ಟಾಡಿಸಿ ಬೇಟೆಯಾಡುವ ಮೂಲಕ ಪ್ರಪಂಚಕ್ಕೆ ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ ಉರಿಯಲ್ಲಿ ಹುತಾತ್ಮರಾದ ೧೯ ಯೋಧರ ಬಲಿದಾನಕ್ಕೆ ಪ್ರತಿಯಾಗಿ ಅದರ ಮೂರು ಪಟ್ಟು ನರಿಗಳನ್ನು ಕೊಂದು ಲೆಕ್ಕ ಚುಕ್ತಾ ಮಾಡಿಲಾಗಿದೆ.
ರಾಜತಾಂತ್ರಿಕ ನಡೆಗೆ ಹ್ಯಾಟ್ಸಾಫ್ ಮೋದಿಜಿ
ಮೋದಿ ಪ್ರಧಾನಿಯಾದ ಆರಂಭದಿಂದ ಎಲ್ಲ ರಾಷ್ಟ್ರಗಳ ಪ್ರವಾಸ ಕೈಗೊಂಡು, ಹೋದೆಡೆಯೆಲ್ಲಾ ಭಯೋತ್ಪಾದನಾ ನಿಗ್ರಹವನ್ನುಪ್ರಸ್ತಾಪ ಮಾಡುತ್ತಾ, ಭಾರತದೊಂದಿಗಿನ ಸಂಬಂಧವನ್ನು ವೃದ್ಧಿಸುತ್ತಾ ಬಂದರು. ಐಎಸ್‌ಐಎಸ್ ಉಗ್ರರಿಗೆ ಪೋಷಕರಾಗಿರುವ ಭಾರತಕ್ಕೆ ಪೆಟ್ರೋಲಿಯಂ ಪೂರೈಕೆ ಮಾಡುವ ರಾಷ್ಟ್ರಗಳಿಗೆ ಜಾಣತನದಿಂದ ಪೆಟ್ಟುಕೊಟ್ಟರು.
ಎನ್‌ಎಸ್‌ಜಿಯಲ್ಲಿ ಖಾಯಂ ಸ್ಥಾನಕ್ಕಾಗಿ ಪ್ರಮುಖ ರಾಷ್ಟ್ರಗಳ ಬೆಂಬಲವನ್ನು ಪಡೆದರು. ಪ್ರಮುಖವಾಗಿ ಕಾಶ್ಮೀರ ಸಮಸ್ಯೆ ಕುರಿತಂತೆ ಜಾಣತನದಿಂದ ಪಾಕಿಸ್ಥಾನವೇ ಅಂತರ್ರಾಷ್ಟ್ರೀಯ ವಿವಾದವನ್ನಾಗಿ ಮಾಡುವಂತೆ ಮಾಡಿದರು. ಈ ವಿಚಾರದಲ್ಲಿ ಉಗ್ರರನ್ನು ಪೋಷಿಸಿ, ಪೊರೆಯುತ್ತಿರುವ ಪಾಕ್ ತನಗೆ ಸರಿಸಮರಿಲ್ಲ ಎಂದು ಬೀಗತೊಡಗಿತು. ಆದರೆ ಮೋದಿ ಮಾತ್ರ ಮೌನವಾಗಿಯೇ ರಾಜತಾಂತ್ರಿಕ ಬಲೆಯನ್ನು ಹೆಣೆಯುತ್ತಿದ್ದರು.
ಉರಿ ಸೆಕ್ಟರ್ ಮೇಲೆ ದಾಳಿ ನಡೆದ 19 ಯೋಧರ ಬಲಿಯಾದ ನಂತರ ಭಾರತ ಹಾಗೂ ಪಾಕ್ ನಡುವಿನ ದ್ವೇಷ ಹೆಚ್ಚಾಯಿತು. ಈ ವೇಳೆ ಮೌನವಾಗಿದ್ದ ಮೋದಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದವು. ಪ್ರಮುಖವಾಗಿ ಕಾಂಗಿಗಳು, ಎಡಪಂಥೀಯರು, ಪ್ರಗತಿಪರರು ಮೋದಿಯನ್ನು ಇನ್ನಿಲ್ಲದಂತೆ ಅವಹೇಳನ ಮಾಡಿದರು.
ಆದರೆ, ನಮ್ಮ ಮೇಲಾಗುತ್ತಿರುವ ದಾಳಿಯನ್ನು ರಾಜತಾಂತ್ರಿಕ ಸೂಕ್ಷ್ಮ ನಡೆಯಿಂದ ಮಟ್ಟ ಹಾಕಬೇಕು ಎಂದು ಎಚ್ಚರಿಕೆಯ ಹೆಜ್ಜೆಯನ್ನಿಟ್ಟ ಮೋದಿ, ಅಮೆರಿಕಾ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಬೆಂಬಲ ಪಡೆದರು. ಪರಿಣಾಮ, ಪ್ರಮುಖ ರಾಷ್ಟ್ರಗಳ ಪಾಕ್ ವಿರುದ್ಧ ಕಳೆದ ಕೆಲವು ದಿನಗಳಿಂದ ಮುಗಿಬಿದ್ದು ಎಚ್ಚರಿಕೆ ನೀಡಿದವು.
ಆದರೆ, ನಿನ್ನೆ ಭಗತ್ ಸಿಂಗ್ ಜನ್ಮದಿನಾಚರಣೆ ಆಚರಿಸಿ ಇಡೀ ದೇಶ ನೆಮ್ಮದಿಯಿಂದ ನಿದ್ದೆ ಮಾಡಿದ್ದರೆ, ಅಲ್ಲಿ ಮೋದಿ ಯೋಜನೆಯೆ ಸಿಂಹಗಳ ಪಡೆ ವ್ಯವಸ್ಥಿತವಾಗಿ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಬೇಟೆಯಾಡಿದವು.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ, ಪತ್ರಿಕಾಗೋಷ್ಠಿ ನಡೆಸಿದ ಸೇನಾ ಮುಖ್ಯಸ್ಥರು ಹಾಗೂ ವಿದೇಶಾಂಗ ಕಾರ್ಯದರ್ಶಿಯವರು, ನಮ್ಮ ಯುದ್ಧ ಪಾಕ್ ವಿರುದ್ಧವಲ್ಲ. ಉಗ್ರರ ವಿರುದ್ಧ. ಉಗ್ರರನ್ನು ಸದೆ ಬಡಿಯಲು ಪಾಕ್ ನಮಗೆ ಸಹಕಾರ ನೀಡುತ್ತದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿಕೆ ನೀಡಿದರು. ಅಲ್ಲಿಗೆ, ಮೋದಿಯವರ ರಾಜತಾಂತ್ರಿಕ ಸೂಕ್ಷ್ಮ ನಡೆಗೆ ಮತ್ತೊಂದು ಸಾಕ್ಷಿ ಸಿಕ್ಕಂತಾಯಿತು. ಅಂದರೆ, ವಿಶ್ವ ಸಮುದಾಯದ ಮುಂದೆ ರಾಜತಾಂತ್ರಿಕವಾಗಿ ಭಾರತ ಸುಭದ್ರವಾದಂತಾಯಿತು ಈ ಹೇಳಿಕೆಯಿಂದ.
ಉರಿಯಲ್ಲಿ ಉಗ್ರರ ದಾಳಿ ನಡೆದಾಗ ಮೋದಿ ಈ ದೇಶಕ್ಕೆ ಮಾತು ನೀಡಿದ್ದರು. ನಮ್ಮ ಯೋಧರ ಪ್ರತಿ ಬಲಿದಾನಕ್ಕೂ ಉತ್ತರ ನೀಡುತ್ತೇವೆ, ಲೆಕ್ಕ ಚುಕ್ತಾ ಮಾಡುತ್ತೇವೆ ಎಂದು ಗುಡುಗಿದ್ದರು. ಅದು ಇಂದು ಸಾಕಾರಗೊಂಡಿದೆ. ಅಂದೆ ಮೋದಿ ದೇಶಕ್ಕೆ ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ.
ಪಾಕ್ ಗೆ ಪೆಟ್ಟು ನೀಡದೇ ನೋವು ನೀಡಿದ ಭಾರತ…
ಇಂದು ಪತ್ರಿಕಾಗೋಷ್ಠಿ ನಡೆಸಿದ ಸೇನಾ ಮುಖ್ಯಸ್ಥರು ಹಾಗೂ ವಿದೇಶಾಂಗ ಕಾರ್ಯದರ್ಶಿಯವರ ಹೇಳಿಕೆಯನ್ನು ಗಮನಿಸಿ.
ಎಲ್‌ಒಸಿ ಭಾಗದಲ್ಲಿ ಉಗ್ರರು ಹೊಂಚುಹಾಕಿ ಕಾದಿದ್ದಾರೆ ಎಂಬ ಖಚಿತ ವರ್ತಮಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಲ್‌ಒಸಿ ದಾಟಿ ದಾಳಿ ಮಾಡಿದ್ದೇವೆ ಎಂದು ರಣಭೀರ್ ಸಿಂಗ್, ಉಗ್ರರಿಂದ ಗಡಿ ಭಾಗದಲ್ಲಿ ಆಗಿರುವ ಹಾನಿಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಉಗ್ರರನ್ನು ಸದೆ ಬಡಿಯಲು ಪಾಕ್ ಸೇನೆ ನಮಗೆ ಸಹಕಾರ ನೀಡುತ್ತದೆ ಎಂದು ನಾವು ನಂಬಿದ್ದೇವೆ. ಈ ವಿಚಾರದಲ್ಲಿ ಪಾಕಿಸ್ಥಾನ ಸೇನಾ ಮುಖ್ಯಸ್ಥರೊಂದಿಗೆ ನಾವು ಈಗಾಗಲೇ ಮಾತುಕತೆಯನ್ನು ನಡೆಸಿದ್ದೇವೆ ಎಂದರು.
ಅಂದರೆ ಈ ಮಾತಿನಿಂದ ನಿಮ್ಮ ಪ್ರಾಯೋಜಿತ ಕೃತ್ಯಗಳನ್ನು ಸಹಿಸುವುದಿಲ್ಲ ಎಂಬ ಸಂದೇಶ ನೀಡುತ್ತಲೇ, ನಿಮ್ಮ ಸಹಕಾರ ನೀಡಿ ಎಂಬ ರಾಜತಾಂತ್ರಿಕ ನಡೆಯನ್ನು ಎಚ್ಚರಿಕೆಯಿಂದ ಇಡುತ್ತಲೇ ತಕ್ಕ ಪಾಠ ಕಲಿಸಲಾಗಿತ್ತು.
ಅದರಲ್ಲು ಮುಖ್ಯವಾದ ಅಂಶವೆಂದರೆ, ಒಟ್ಟು ಎಂಟು ಸೀಮಿತ ದಾಳಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ದಾಳಿ ನಡೆಸಲು ಖಚಿತ ಮಾಹಿತಿ ಆಧಾರದ ಯೋಜನೆ ರೂಪುಗೊಂಡಿದೆ. ಇಂತಹ ದಾಳಿಯನ್ನು ಮುಂದಿನ ದಿನಗಳಲ್ಲಿ ಮತ್ತೆ ಕೈಗೊಳುವ ಇರಾದೆ ನಮ್ಮ ಮುಂದಿಲ್ಲ . ಆದರೆ ಪಾಕ್‌ನ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಸೀಮಿತ ಕಾರ್ಯಚರಣೆ ನಡೆಸಲು ನಾವು ಸಿದ್ಧವಾಗಿದ್ದೇವೆ ಎನ್ನುವ ಎಚ್ಚರಿಕೆಯನ್ನು ಪಾಕ್‌ಗೆ ರವಾನಿಸಿರುವುದು ಭಾರತದ ಜಾಣ ಹಾಗೂ ಸುಭದ್ರ ನಡೆಯಾಗಿದೆ.
ಯುದ್ಧಕ್ಕೆ ಸನ್ನದ್ಧ ಸ್ಥಿತಿಯ ಪರಿಸ್ಥಿತಿ
ನಾವು ಇದನ್ನು ಮುಂದುವರೆಸಲು ಇಚ್ಛಿಸುವುದಿಲ್ಲ ಎಂದು ಭಾರತ ಹೇಳಿದ್ದರೂ, ಪಾಪಿ ಪಾಕಿಸ್ಥಾನದ ಕುತಂತ್ರ ಯಾವ ಕ್ಷಣದಲ್ಲಾದರೂ ಜಾಗೃತವಾಗಿ ಭಾರತದ ಮೇಲೆ ದಾಳಿ ನಡೆಸಬಹುದು ಎಂದು ಕೇಂದ್ರ ಸರ್ಕಾರ ಅರಿಯದೇ ಇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿಯೇ ಗಡಿ ಭಾಗದ ಜನವಸತಿ ಪ್ರದೇಶಗಳಿಂದ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗೂ ಎಂತಹುದ್ದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದವಾಗಿರಿ ಎಂದು ಸ್ವತಃ ಪ್ರಧಾನಿ ಮೋದಿಯೇ ಹೇಳಿರುವುದು ಯುದ್ಧದ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂಬುದನ್ನು ಸೂಚಿಸುತ್ತದೆ.
ಹೀಗಾಗಿ, ಯುದ್ಧ ನಡೆಯುವುದಾದರೆ ನಡೆಯಲಿ.. ಯೋಧರೊಂದಿಗೆ, ಕೇಂದ್ರ ಸರ್ಕಾರದೊಂದಿಗೆ ಇಡಿಯ ಭಾರತವಿದೆ… ನಾವಿದ್ದೇವೆ… ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ… ವಾಮಮಾರ್ಗವೇ ಅಷ್ಟೊಂದು ಧೈರ್ಯದಿಂದ ಇರುವಾಗ, ರಾಜಮಾರ್ಗವೇಕೆ ಹೆದರಬೇಕು… ಅಂತಹ ಪರಿಸ್ಥಿತಿ ಬಂದರೆ ಯುದ್ಧ ಘೋಷಿಸಿ… ಎಲ್ಲರೂ ಒಟ್ಟಾಗಿ ಹೋರಾಡೋಣ… ಭಾರತಾಂಬೆಯನ್ನು ರಕ್ಷಿಸೋಣ…. ಜೈಹಿಂದ್…
ಯುದ್ಧ ಘೋಷಣೆಯಾದರೆ ನಾಗರಿಕರೇನು ಮಾಡಬಹುದು…?
ಪರಿಸ್ಥಿತಿ ಕೈಮೀರಿ ನಡೆದು ಒಂದು ವೇಳೆ ಯುದ್ಧ ಘೋಷಣೆಯಾದರೆ ಸೈನಿಕರು ಗಡಿಯಲ್ಲಿ ಹೋರಾಟ ಮಾಡಿದರೆ, ದೇಶದ ಪ್ರತಿ ನಾಗರಿಕನೂ ಅದಕ್ಕೆ ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಸೈನ್ಯದಲ್ಲಿ ಹೋಗಿ ಹೋರಾಡುವುದು ಸಾಧ್ಯವಿಲ್ಲ. ಆದರೆ ಈ ಕೆಳಗಿನ ಸೇವೆಗಳನ್ನು ಮಾಡಬಹುದು.
*ಮೊಟ್ಟ ಮೊದಲನೆಯದಾಗಿ ಜಾತಿ, ಧರ್ಮ, ಭಾಷೆ ಹಾಗೂ ರಾಜ್ಯ ಎಂಬುದನ್ನು ಬದಿಗಿಟ್ಟು ಕೇಂದ್ರ ಸರ್ಕಾರ ಹಾಗೂ ಸೇನೆಗೆ ನೈತಿಕ ಬೆಂಬಲ ನೀಡುವುದು.
*ದೇಶದ ಯಾವುದೇ ಸ್ಥಳಕ್ಕೆ ಅಪಾಯ ಸಂಭವಿಸುವ ಸಂದರ್ಭ ಎದುರಾದರೆ ಅಂತಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾಗುವುದು.
*ಸೇನೆಯಲ್ಲಿ ಹೋರಾಡುತ್ತಿರುವ ಯೋಧರಿಗೆ ನೈತಿಕ ಬೆಂಬಲ ನೀಡುವುದು. ಅದರಲ್ಲಿ ಪ್ರಮುಖವಾಗಿ ನಿಮ್ಮ ನಗರ, ಬಡಾವಣೆಗಳಲ್ಲಿ ಯೋಧರ ಕುಟುಂಬಸ್ಥರು ಯಾರಾದರೂ ಇದ್ದರೆ ಅಂತಹವರಿಗೆ ನೈತಿಕ ಬೆಂಬಲವಾಗಿ ನಿಲ್ಲುವುದು.
*ನಗರಗಳಲ್ಲಿನ ಪ್ರಮುಖ ವ್ಯಕ್ತಿಗಳೂ, ಶ್ರೀಮಂತರು, ನಾಗರಿಕರು ಯೋಧರ ಕುಟುಂಬಸ್ಥರನ್ನು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ಮೂಡಿಸುವುದು.
*ಒಂದು ವೇಳೆ ಯಾವುದಾದರೂ ಯೋಧ ಹುತಾತ್ಮನಾದರೆ ಇಡಿಯ ನಗರ ಆ ಯೋಧನ ಕುಟುಂಬದ ಬೆನ್ನಿಗೆ ನಿಲ್ಲುವುದು.
*ಎಲ್ಲಕ್ಕೂ ಪ್ರಮುಖವಾಗಿ ಯುದ್ಧ ಘೋಷಣೆಯಾದರೆ ಅತ್ಯಧಿಕ ವೆಚ್ಚ ತಗಲುತ್ತದೆ. ಹೀಗಾಗಿ, ಸೇನೆಯ ಬ್ಯಾಂಕ್ ಖಾತೆಗೆ ಒಂದು ರೂಪಾಯಿಯಿಂದ ಹಿಡಿದು ಅವರವರ ಶಕ್ತಿಗೆ ಅನುಸಾರವಾಗಿ ಕೊಡುಗೆ ಸಂದಾಯ ಮಾಡುವುದು.
*ಯುದ್ಧ ಎಂದರೆ ಕೇವಲ ಗಡಿಯಲ್ಲಿ ನಡೆಯುವುದಲ್ಲ. ಸ್ಥಳೀಯ ಮಟ್ಟದಲ್ಲಿ ಅಹಿತಕರ ಘಟನೆಗಳನ್ನು ಸೃಷ್ಠಿಸಿ ಆಂತರಿಕವಾಗಿ ಕುಟಿಲ ಯುದ್ಧ ನಡೆಯುತ್ತದೆ. ಇಂತಹ ಬೆಳವಣಿಗೆ ನಡೆಯದಂತೆ ಎಚ್ಚರಿಕೆ ವಹಿಸುವುದು.
*ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕ ಪ್ರಚೋದನಾತ್ಮಕ ಸಂದೇಶಗಳನ್ನು ರವಾನೆ ಮಾಡುವುದು ಸಲ್ಲ. ಇದರಿಂದ ಆಂತರಿಕ ಭದ್ರತೆಗೆ ಧಕ್ಕೆ ಬರುತ್ತದೆ.
*ಎಲ್ಲಕ್ಕೂ ಮಿಗಿಲಾಗಿ, ದೇಶದ ರಕ್ಷಣೆಗೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಪಕ್ಷಾತೀತವಾಗಿ, ಸೈದ್ಧಾಂತಿಕ ನಿಲುವಿನ ಹೊರತಾಗಿ ಬೆಂಬಲ ನೀಡಬೇಕು.
Discussion about this post