Read - < 1 minute
ಕೌಲಾಲಂಪುರ್, ಆ.31: ಪ್ರಸಿದ್ಧ ಬಟು ಗುಹೆಯಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಭಯಾನಕ ಇಸ್ಲಾಮಿಕ್ ಸ್ಟೇಟ್ನ ಮೂವರು ಉಗ್ರರನ್ನು ಮಲೇಷ್ಯಾದಲ್ಲಿ ಬಂಧಿಸಲಾಗಿದೆ.
ಐಎಸ್ನ ಮೂವರು ಭಯೋತ್ಪಾದಕರನ್ನು ಆ.27 ರಿಂದ 29ರ ವರೆಗೆ ಕೌಲಾಲಂಪುರ್, ಸೆಲೆನ್ಗೊರ್ ಮತ್ತು ಪಹಂಗ್ನಲ್ಲಿ ಭಯೋತ್ಪಾದನೆ ನಿಗ್ರಹ ವಿಭಾಗದ ವಿಶೇಷ ತಂಡವು ಬಂಧಿಸಿದೆ.
ಇವರು ಹಿಂದೂ ದೇವಸ್ಥಾನ, ಮನರಂಜನಾ ಕೇಂದ್ರ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸ್ ಮಹಾನಿರೀಕ್ಷಕ ಖಾಲೀದ್ ಅಬುಬಕರ್ ತಿಳಿಸಿದ್ದಾರೆ.
Discussion about this post