ನವದೆಹಲಿ, ಸೆ.3: ಬಹುಕೋಟಿ ರೂಪಾಯಿ ಭೂ ಮಂಜೂರಾತಿ ಪ್ರಕರಣದ ಸಂಬಂಧ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಯುಪಿಎಸ್ಸಿ ಸದಸ್ಯ ಭೂಪಿಂದರ್ ಸಿಂಗ್ ಹೂಡಾ ಅವರ ನಿವಾಸ, ಮತ್ತು ಇತರ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಂದು ಬೆಳಿಗ್ಗೆ ಕೇಂದ್ರೀಯ ತನಿಖಾದಳ-ಸಿಬಿಐ ಏಕಕಾಲಕ್ಕೆ ನಡೆಸಿದೆ. ಈ ದಾಳಿಯ ವೇಳೆ 1,500 ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು ಮತ್ತು ದಸ್ತಾವೇಜುಗಳಿಗೆ ಸಿಬಿಐ ವ್ಯಾಪಕ ಶೋಧ ನಡೆಸಿ ಪರಿಶೀಲಿಸಿದೆ.
ಹೂಡಾ ಅವರ ನಿವಾಸವಲ್ಲದೇ, ಆಗಿನ ಮುಖ್ಯ ಕಾರ್ಯದರ್ಶಿ ಎಂ.ಎಲ್. ತಯ್ಯಲ್, ಯುಪಿಎಸ್ಸಿ ಸದಸ್ಯ ಚಟ್ಟರ್ ಸಿಂಗ್ ಮತ್ತು ಐಎಎಸ್ ಅಧಿಕಾರಿ ಎಸ್.ಎಸ್. ಧಿಲ್ಲೋನ್ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ
ಗುರ್ಗಾಂವ್ನಲ್ಲಿ ರೈತರಿಂದ ಭೂಮಿ ಖರೀದಿ ವೇಳೆ ನಡೆದಿದೆ ಎನ್ನಲಾದ ಭಾರೀ ಅವ್ಯವಹಾರಗಳ ಸಂಬಂಧ ಹರಿಯಾಣದ ರೋಹಟ್, ಗುರ್ಗಾಂವ್, ಪಂಚಕುಲ ಮತ್ತು ದೆಹಲಿಯ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ಸಿಬಿಐ ವಕ್ತಾರ ಆರ್.ಕೆ.ಕೌರ್ ತಿಳಿಸಿದ್ದಾರೆ.
ಅಕ್ರಮ ಭೂ ಮಂಜೂರಾತಿ ಪ್ರಕರಣವೊಂದರಲ್ಲಿ ಹಣ ದುರ್ಬಳಕೆ ತಡೆ ಕಾಯ್ದೆ (ಎಂಪಿಎಲ್ಎ) ಅಡಿ ಕಳೆದ ಜುಲೈನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಭೂಪಿಂದರ್ ಸಿಂಗ್ ಹೂಡಾ ಮತ್ತು ಅವರಿಂದ ಭೂಮಿ ಮಂಜೂರಾತಿ ಪಡೆದಿದ್ದ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಹೂಡಾ ಅವರು ಮುಖ್ಯಮಂತ್ರಿಯಾಗಿದ್ದಾಗ, ಅಕ್ರಮವಾಗಿ ಪಂಚಕುಲದಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಗೆ ಭೂಮಿಯನ್ನು ಮಂಜೂರು ಮಾಡಿದ್ದರು. ಈ ಭೂ ಮಂಜೂರಾತಿಗಾಗಿ ಸಕರ್ಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳಷ್ಟು ನಷ್ಟವಾಗಿತ್ತು ಎಂದು ಆರೋಪಿಸಲಾಗಿದೆ.
ಗುರುಗಾಂವ್ ಜಿಲ್ಲೆಯ ಮನೆಸರ್, ನವರಂಗ್ಪುರ್ ಮತ್ತು ಲಖನೌಲಾ ಗ್ರಾಮಗಳ ರೈತರು ಮತ್ತು ಭೂಮಾಲೀಕರಿಂದ ತೀರಾ ಅಗ್ಗದ ಬೆಲೆಗೆ 400 ಎಕರೆ ಭೂಮಿಗಳನ್ನು ಖರೀದಿಸಿ ರೈತರಿಗೆ ಸುಮಾರು 1500 ಕೋಟಿ ರೂ.ಗಳಷ್ಟು ವಂಚನೆ ಮಾಡಲಾಗಿದೆ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ (ಹೂಡಾ) ಅಧ್ಯಕ್ಷರಾಗಿದ್ದಾಗ ಕೈಗಾರಿಕೆ ಭೂಮಿಗಳ ಮಂಜೂರಾತಿಯಲ್ಲಿ ಭಾರಿ ಅವ್ಯವಹಾರಗಳನ್ನು ನಡೆಸಿರುವ ಆರೋಪಕ್ಕಾಗಿ ಹೂಡಾ ಈಗಾಗಲೇ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.
ಈ ನಡುವೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಕೇರಳ ಅಬಕಾರಿ ಖಾತೆ ಮಾಜಿ ಸಚಿವ ಕೆ.ಬಾಬು ಅವರ ನಿವಾಸಗಳ ಮೇಲೆ ಇಂದು ಬೆಳಿಗೆ ಜಾಗ್ರತ ಮತ್ತು ಭ್ರಷ್ಟಾಚಾರ ವಿರೋಧಿ ದಳ ದಾಳಿ ನಡೆಸಿದೆ.
Discussion about this post