Read - < 1 minute
ಸೆಲ್ಫಿ ಕ್ರೇಜ್ನಿಂದ ಇತ್ತೀಚಿನ ದಿನಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇದೆ. ಆದರೆ ಜನರು ಮಾತ್ರ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಿಲ್ಲ. ಕೆಲವೊಮ್ಮೆ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಅದಕ್ಕೊಂದು ತಾಜಾ ಉದಾಹರಣೆ, ರಾಜಸ್ಥಾನದ ಮೌಂಟ್ ಅಬು ಗಿರಿಧಾಮದಲ್ಲಿ ನಡೆದಿದೆ.
ಮೌಂಟ್ ಅಬು ಹೋಟೆಲ್ ಬಳಿ ಒಂದು ಭಾರೀ ಗಾತ್ರದ ಹೆಬ್ಬಾವವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು. ಸೆಲ್ಫಿ ಹಠಕ್ಕೆ ಬಿದ್ದ ಯುವಕನೊಬ್ಬ ಸೆರೆ ಸಿಕ್ಕ ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ. ಹಠಾತ್ತನೆ ಆ ಹಾವು ಆತನ ಮೇಲೆರಗಿ ಕಚ್ಚಿತು.
ಪರ್ವತ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವವನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರು ಹಿಡಿದು ಕಾಡಿಗೆ ಬಿಡಲು ಹಿಡಿದುಕೊಂಡು ಹೋಗುತ್ತಿದ್ದಾಗ ಅದನ್ನು ನೋಡಿ ಹಾವಿನ ಪಕ್ಕದಲ್ಲೇ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಯುವಕನಿಗೆ ಹಾವು ಕಚ್ಚಿದೆ. ತಕ್ಷಣ ಗಾಬರಿಯಿಂದ ತಬ್ಬಿಬ್ಬಾದ ಆತ ಮೊಬೈಲ್ ಎಸೆದು ಓಡಿ ಕೆಳಗೆ ಬಿದ್ದ. ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
Discussion about this post