Read - < 1 minute
ನವದೆಹಲಿ, ಸೆ.1: ದೇಶದಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಆಡಿಸಲು ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅವಸರ ಮಾಡುತ್ತಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಿಸಿಸಿಐ ಈಗಾಗಲೇ ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಪಿಂಕ್ ಚೆಂಡನ್ನು ಅಳವಡಿಸಿ ಗ್ರೇಟರ್ ನೊಯ್ಡಾದಲ್ಲಿ ಹೊನಲು ಬೆಳಕಿನಲ್ಲಿ ಆಡಿಸಿತ್ತು.
ಬಿಸಿಸಿಐ ಅವಸರದ ನಿಧರ್ಾರ ತೆಗೆದುಕೊಳ್ಳುವುದಿಲ್ಲ. ದುಲೀಪ್ ಟ್ರೋಫಿಯಲ್ಲಿ ಟ್ರಯಲ್ಸ್ ಗಳನ್ನು ಮುಂದುವರಿಸಲಿದೆಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
Discussion about this post