Read - < 1 minute
ಚಿಕಾಗೊ, ಅ.15: ಎಚ್ಐವಿ ಸೋಂಕು ಗುಣಪಡಿಸುವ ಚಿಕಿತ್ಸಾ ವ್ಯವಸ್ಥೆ ಮಂಗನ ಮೇಲೆ ಪ್ರಯೋಗಿಸಲಾಗಿದ್ದು, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಕಾಯಿಲೆ ವಾಸಿಯಾಗುವ ಆಶಾವಾದ ಅಮೆರಿಕದ ಸಂಶೋಧಕರ ಮುಖದಲ್ಲೀಗ ಸಂತಸದ ನಗುತರಿಸಿದೆ. ಎಚ್ಐವಿ ಗುಣಪಡಿಸಬಲ್ಲ ಔಷಧಕ್ಕೆ ಆ್ಯಂಟಿ ರಿಟ್ರೋವೈರಲ್ ತೆರಪಿ ಅಥವಾ ಎಆರ್ ಟಿ ಎಂದು ಹೆಸರಿಸಲಾಗಿದೆ.
ಗುರುವಾರದ ವಿಜ್ಞಾನ ಪತ್ರಿಕೆಯಲ್ಲಿ ಸಂಶೋತ ಔಷಧ ವಿಚಾರ ಪ್ರಕಟಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ ಸಂಶೋಧನೆ ಇದೆಂದು ಪತ್ರಿಕೆ ಹೇಳಿದೆ.
ಟಕೇಡ ಫಾರ್ಮಾಸ್ಯೂಟಿಕಲ್ಸ್ ಎಂಟಿವಿಯೋ ಔಷಧದಂತೆ ಚಿಕಿತ್ಸಾ ಗುಣ ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಎಚ್ಐವಿ ಹೊಸದಾಗಿ ಸೋಂಕು ತಗಲಿದವರಲ್ಲಿ ಸಂಶೋತ ಔಷಧವನ್ನು ಪ್ರಯೋಗಿಸಲಾಗಿದೆ. ಎಸ್ಐವಿ ಸೋಂಕಿನಿಂದ ರಕ್ಷಣೆ ಪಡೆಯಬಲ್ಲ ನಿರೋಧಕ ಶಕ್ತಿ ಔಷಧಕ್ಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕಾರ್ಯಶೀಲ ವಾಸಿಯಾಗುವ ಶಕ್ತಿ ಹೊಸ ಔಷಧಕ್ಕೆ ಇದೆ ಎಂದು ಎಮೋರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕ ಅಫ್ತಾಬ್ ಅನ್ಸಾರಿ ಹೇಳಿದ್ದಾರೆ.
Discussion about this post