Read - < 1 minute
ನ್ಯೂಯಾರ್ಕ್:ಅಮೆರಿಕದಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಾದ ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ರಾಷ್ಟ್ರೀಯ ಟಿವಿ ಚರ್ಚೆಯ ಕುರಿತಂತೆ ಭಾರೀ ಕುತೂಹಲ ಮೂಡಿದ್ದು, ತೀವ್ರ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಇದರೊಂದಿಗೆ ಶ್ವೇತಭವನ ಪ್ರವೇಶಕ್ಕಾಗಿ ಡೆಮಾಕ್ರೆಟಿಕ್ ಅಭ್ಯರ್ಥಿ ಹಿಲರಿ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ನಡುವೆ ತೀವ್ರ ಜಿದ್ದಾಜಿದ್ದಿ ಉಂಟಾಗಿದೆ.
90ನಿಮಿಷಗಳ ಕಾಲ ನಡೆಯಲಿರುವ ಈ ಚರ್ಚೆಯನ್ನು ದಾಖಲೆಯ 100ಮಿ.ಅಮೆರಿಕನ್ನರು ವೀಕ್ಷಿಸುವ ನಿರೀಕ್ಷೆಯಿದೆ. ನ.8ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಾಗಿ ಆರು ವಾರಗಳ ಮುಂಚಿತವಾಗಿ ಈ ಮುಖಾಮುಖಿ ಚರ್ಚೆ ನಡೆಯಲಿದೆ. ಈ ಚುನಾವಣೆಗೆ ಮುಂಚಿತವಾಗಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದ್ದು, 1980ರಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳ ಮುಖಾಮುಖಿಯನ್ನು 80ಮಿ.ಜನರು ವೀಕ್ಷಿಸಿದ್ದರು. ಆಗ ಡೆಮಾಕ್ರೆಟಿಕ್ ಅಭ್ಯರ್ಥಿಯಾಗಿ ಜಿಮ್ಮಿ ಕಾರ್ಟರ್ ಮತ್ತು ರಿಪಬ್ಲಿಕನ್ನಿಂದ ರೊನಾಲ್ಡ್ ರೇಗನ್ ಸ್ಪರ್ಧಿಸಿದ್ದರು. ಕ್ಲಿಂಟನ್(68)ಮೊದಲ ಮಹಿಳಾ ಅಧ್ಯಕ್ಷೆಯಾಗುವ ತವಕದಲ್ಲಿದ್ದರೆ,
ಹಿಂದುಗಳಿಗೆ ಶ್ಲಾಘನೆ
ಜಗತ್ತಿನ ನಾಗರಿಕತೆ ಹಾಗೂ ಅಮೆರಿಕ ಸಂಸ್ಕೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ ಹಿಂದೂ ಸಮುದಾಯವನ್ನು ಟ್ರಂಪ್ ಪ್ರಶಂಸಿಸಿದದಾರೆ. ಮುಂದಿನ ತಿಂಗಳು ನ್ಯೂಜೆರ್ಸಿಯಲ್ಲಿ ನಡೆಯುವ ಇಂಡಿಯನ್ -ಅಮೆರಿಕನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಟ್ರಂಪ್(80)ಇಸ್ಲಾಮಿಕ್ ಭಯೋತ್ಪಾದನೆಯಿಂದ ಸಂತ್ರಸ್ತರಾದವರಿಗೆ ಇದರಿಂದ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.ಹಿಂದುಗಳ ಶ್ರಮ ಜೀವನ, ಕೌಟುಂಬಿಕ ಮೌಲ್ಯ, ಹಾಗೂ ಈಗಿನ ಭಾರತ ಸರಕಾರದ ಕಠಿಣ ವಿದೇಶಾಂಗ ನೀತಿಯನ್ನು ನಾವು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.
Discussion about this post