Read - < 1 minute
ನವದೆಹಲಿ: ಅ:16: ಪಾಕ್ ಕಲಾವಿದರನ್ನು ಬೆಂಬಲಿಸಿದ್ದ ಬಾಲಿವುಡ್ ನಿರ್ದೇಶಕ ಕರಣ್ಜೋಹರ್ ಅವರ ಹೊಸ ಚಿತ್ರ ಅಧಮ್ ಬಿಡುಗಡೆಗೆ ರಾಜ್ಯ ಸಕರ್ಾರಗಳು ಸಹಕರಿಸಬೇಕೆಂದು ಎಐಸಿಸಿ ಪ್ರಧಾನಕಾರ್ಯದರ್ಶಿ ದಿಗ್ವಿಜಯ್ಸಿಂಗ್ ಮನವಿ ನೀಡಿದ್ದಾರೆ.
ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪಾಕಿಸ್ತಾನ ಮತ್ತು ಭಾರತದ ಎರಡು ದೇಶಗಳ ಜನರ ನಡುವೆ ಸಂಪರ್ಕ ಬೆಳೆಯಬೇಕು. ವ್ಯಾಪಾರ-ವಹಿವಾಟುಗಳು ಬೆಳೆಯಬೇಕು. ಸಾಂಸ್ಕೃತಿಕ ವಿನಿಮಯದ ಮೂಲಕ ಸಂಬಂಧ ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಕಲಾವಿದರನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿರುವ ದಿಗ್ವಿಜಯ್ಸಿಂಗ್ ಅವರು, ಹಾಗಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಕ್ಕೆ ಕ್ಷಮೆ ಕೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕರಣ್ಜೋಹಾರ್ ಅವರು ಇತ್ತೀಚೆಗೆ ಪಾಕ್ ಕಲಾವಿದರ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರ ಚಿತ್ರ ಬಿಡುಗಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ಸಿಂಗ್ ಅವರು, ಎಲ್ಲಾ ರಾಜ್ಯ ಸರ್ಕಾರಗಳು ಚಿತ್ರ ಪ್ರದರ್ಶನಕ್ಕೆ ಪೂರ್ಣ ಬೆಂಬಲ ನೀಡಬೇಕು. ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
Discussion about this post