ರಾಳೆಗಣ್ ಸಿದ್ಧಿ, ಸೆ.೬: ಕೇಜ್ರಿವಾಲ್ ಮೇಲಿದ್ದ ನನ್ನ ನಂಬಿಕೆ ಸಂಪೂರ್ಣ ಹೋಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೇಜ್ರಿವಾಲ್ ಗ್ರಾಮ್ ಸ್ವರಾಜ್ ಎಂಬ ಪುಸ್ತಕವನ್ನು ಬರೆದಿದ್ದರು. ಈ ರೀತಿಯ ಬೆಳವಣಿಗೆಯನ್ನು ಗ್ರಾಮ್ ಸ್ವರಾಜ್ ಎನ್ನಲು ಸಾಧ್ಯವೇ? ಇಂದು ದೆಹಲಿ ನಡೆಯುತ್ತಿರುವ ಬೆಳವಣಿಗೆ ನನಗೆ ಸಾಕಷ್ಟು ನೋವುಂಟು ಮಾಡಿದೆ. ಪಕ್ಷದಲ್ಲಿ ಸೇರ್ಪಡೆಗೊಳ್ಳುವ ವ್ಯಕ್ತಿಗಳು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ಹೇಗೆ ಗುರುತಿಸುವೆ ಎಂದು ಕೇಳಿದ್ದೆ. ಕೇಜ್ರಿವಾಲ್ ಬಳಿ ಯಾವುದೇ ನಿರುತ್ತರಾಗಿದ್ದರು. ಆದರೆ, ಈಗ ಅದರ ಅನುಭವವಾಗುತ್ತಿದೆ. ಯಾವುದೇ ಪಕ್ಷವಾಗಲಿ, ನಾಯಕರಾಗಲಿ, ಪಕ್ಷಕ್ಕೆ ಸೇರ್ಪಡೆಗೊಳ್ಳುವ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಶೀಲಿಸುವುದು ಅಗತ್ಯ ಎಂದರು.
ಭಾರತೀಯ ರಾಜಕೀಯದಲ್ಲಿ ಕೇಜ್ರಿವಾಲ್ ಹೊಸ,ವಿಭಿನ್ನ ಉದಾಹರಣೆಯಾಗಲಿದ್ದಾನೆ. ದೇಶವನ್ನು ಉನ್ನತ ಹಾದಿಯತ್ತ ಕರೆದೊಯ್ಯಲಿದ್ದಾನೆಂದು ನಂಬಿದ್ದೆ. ಆದರೆ, ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದರೆ ಬಹಳ ನೋವಾಗುತ್ತಿದೆ. ಕೇಜ್ರಿವಾಲ್ ಸಹೋದ್ಯೋಗಿಗಳು ಜೈಲಿಗೆ ಹೋಗುತ್ತಿದ್ದಾರೆ. ಕೆಲವರು ವಂಚನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಕೇಜ್ರಿವಾಲ್ ಬಗ್ಗೆ ನನಗಿದ್ದ ನಂಬಿಕೆ ಸಂಪೂರ್ಣ ಹೋಗಿದೆ ಎಂದಿದ್ದಾರೆ.
Discussion about this post