Read - < 1 minute
ಬೆಂಗಳೂರು: ಸೆ:25; ಜಕ್ಕಣಾಚಾರ್ಯ ಶಿಲ್ಪಿ ಅಲ್ಲ ಆತನೊಬ್ಬ ಕಾಲ್ಪನಿಕ ವ್ಯಕ್ತಿಯೆಂದು ಸಾಹಿತಿ ಕುಂ.ವೀರಭದ್ರಪ್ಪನವರು ನೀಡಿರುವ ಹೇಳಿಕೆ ಖಂಡನೀಯ ಎಂದು ವಿಶ್ವಕರ್ಮ ಮಠದ ಜ್ಞಾನಾನಂದ ಆಶ್ರಮದ ಸ್ವಾಮಿ ಶಿವಾತ್ಮಾನಂದ ಸರಸ್ವತೀ ಅವರು ತಿಳಿಸಿದ್ದಾರೆ.
ಅಧ್ಯಯನದ ಪ್ರಕಾರ ಜಕ್ಕಣಾಚಾರ್ಯ ಎಂಬ ಶಿಲ್ಪಿ ಇಲ್ಲವೇ ಇಲ್ಲ. ಆತ ಕಾಲ್ಪನಿಕ ವ್ಯಕ್ತಿ ಎಂದು ಸಾಹಿತಿ ವೀರಭದ್ರಪ್ಪನವರು ವಿವಾದಾದತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನು ಇಡೀ ವಿಶ್ವಕರ್ಮ ಜನಾಂಗವೇ ಖಂಡಿಸುತ್ತದೆ ಎಂದಿದ್ದಾರೆ.
ಹೊಯ್ಸಳ, ಕಲಾಸಮ್ರಾಜ್ಯ ಅಜರಾಮರವಾಗಲು ಅಮರ ಶಿಲ್ಪಿ ಜಕ್ಕಣಾಚಾರ್ಯರೇ ಕಾರಣ. ಚಾಲುಕ್ಯ ಶೈಲಿಗೆ ಹೊಸ ರೂಪಕೊಟ್ಟು ತಮ್ಮದೇ ಆದ ವಿಶಿಷ್ಟ ಹೊಯ್ಸಳ ಶಿಲ್ಪಶೈಲಿಯನ್ನು ರೂಪಿಸಿಕೊಂಡು ದೇವಾಲಯಗಳನ್ನು ನಿರ್ಮಿಸಿರುವುದು ಇಂದಿಗೂ ಅಜರಾಮರವಾಗಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಜನಮಾನಸದಲ್ಲಿ ಹಚ್ಚ-ಹಸಿರಾಗಿರುವ ಜಕ್ಕಣಾಚಾರ್ಯ ಎಂಬ ಶಿಲ್ಪಿ ಶೂನ್ಯದಲ್ಲಿ ಹುಟ್ಟಿಲ್ಲ. ಒಬ್ಬ ಜೀವಂತ ಶಿಲ್ಪಿಯಾಗಿ ನಾಡಿನ ಮಣ್ಣಿನಲ್ಲಿ ಹುಟ್ಟಿ ಬೆಳೆದ ಶಿಲ್ಪಿ . ಶಿಲ್ಪಕಲಾ ಸೇವೆಯಲ್ಲಿ ಅಜರಾಮರವಾಗಿರುವ ಅವರನ್ನು ಶಿಲ್ಪಿಯೇ ಅಲ್ಲ ಎಂಬ ಸಾಹಿತಿ ವೀರಭದ್ರಪ್ಪನವರು ಹೇಳಿಕೆ ಸರಿಯಲ್ಲ ಎಂದಿದ್ದಾರೆ.
Discussion about this post