ಮಡಿಕೆೇರಿ ಅ.30 : ಟಿಪ್ಪು ಸುಲ್ತಾನ್ ಕೆೇವಲ ಮುಸಲ್ಮಾನರಿಗೆ ಸೀಮಿತವಾದ ವ್ಯಕ್ತಿಯಲ್ಲವೆಂದು ಅಭಿಪ್ರಾಯಪಟ್ಟಿರುವ ಟಿಪ್ಪು ಅಭಿಮಾನಿ ವೇದಿಕೆ, ಟಿಪ್ಪು ಜಯಂತಿಯನ್ನು ಘೋಷಿಸಿರುವ ಸರ್ಕಾರವೆ ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ಮಾಡಲಿ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದಶರ್ಿ ಇಸಾಕ್ ಖಾನ್, ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆಯಬೇಕೆನ್ನುವುದೆ ನಮ್ಮ ಉದ್ದೇಶವೆಂದರು. ಟಿಪ್ಪು ಸುಲ್ತಾನ್ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಎನ್ನುವ ಹೆಮ್ಮೆಯನ್ನು ನಾವು ಹೊಂದಿದ್ದೇವೆಯೇ ಹೊರತು ಟಿಪ್ಪು ಒಂದು ಸಮುದಾಯಕ್ಕೆ ಸೇರಿದವರಲ್ಲವೆಂದು ತಿಳಿಸಿದರು.
ಮುಸಲ್ಮಾನರು ಜಯಂತಿ ಆಚರಿಸಿ ಎಂದು ಕೇಳಿ ಕೊಂಡಿರಲಿಲ್ಲ. ಆದರೆ ಸಕರ್ಾರ ಟಿಪ್ಪು ನಡೆಸಿದ ಉತ್ತಮ ಆಡಳಿತವನ್ನು ನೋಡಿಯೆ ಜಯಂತಿ ಆಚರಣೆಯ ನಿಧರ್ಾರಕ್ಕೆ ಬಂದಿದೆ. ಕಳೆದ ಬಾರಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ ನಡೆದ ಕಾರಣ ಗಲಭೆ ನಡೆದಿರಬಹುದೆಂದು ಅಭಿಪ್ರಾಯಪಟ್ಟ ಇಸಾಕ್ ಖಾನ್ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಟಿಪ್ಪು ಜಯಂತಿ ಸಕರ್ಾರಿ ಜಯಂತಿಯಾಗಿಯೆ ಶಾಂತಿಯುತವಾಗಿ ನಡೆಯಲಿ ಎಂದರು.
ಟಿಪ್ಪುವಿನ ವಿಚಾರದಲ್ಲಿ ವಿವಾದ ಸೃಷ್ಟಿಸಿರುವುದು ದುರಂತವೆಂದು ಅಭಿಪ್ರಾಯಪಟ್ಟ ಇಸಾಕ್ ಖಾನ್, ಕೊಡಗು ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯಲು ಟಿಪ್ಪು ವಿಚಾರವೊಂದೆ ಕಾರಣವಲ್ಲ ಎಂದರು. ಕೊಡವರು ಹಾಗೂ ಕೊಡಗಿನ ಮೇಲೆ ಮುಸಲ್ಮಾನರಿಗೆ ಅಪಾರ ಅಭಿಮಾನವಿದೆ. ಆದರೆ, ಕೆಲವರು ಕೋಮುವಾದವನ್ನು ಬಂಡವಾಳ ಮಾಡಿಕೊಂಡು ಹಿಂದೂ ಹಾಗೂ ಮುಸ್ಲಿಮರ ನಡುವೆ ಬಿರುಕು ಮೂಡಿಸಿ ಲಾಭ ಪಡೆಯುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಸ್ಲಾಮಿನಲ್ಲಿ ವ್ಯಕ್ತಿಪೂಜೆ ಇಲ್ಲ, ಆದರೆ, ಟಿಪ್ಪುವನ್ನು ವಿರೋಧಿಸುವವರೆ ಟಿಪ್ಪು ಜಯಂತಿ ಆಚರಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದರು ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಮುಸಲ್ಮಾನರು ಮಾತ್ರವಲ್ಲ ಉಭಯ ಕಡೆಗಳಿಂದಲೂ ಶಾಂತಿಗಾಗಿ ಸಹಕಾರ ದೊರೆಯಬೇಕಾಗಿದೆ. ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಇಬ್ರಾಹಿಂ ಎಂಬುವವರು ನೀಡಿದ ಹೇಳಿಕೆ ಅರ್ಥಹೀನವಾಗಿದ್ದು, ಅವರು ಒತ್ತಡದಿಂದ ಜೀವನ ಸಾಗಿಸುವ ಅಗತ್ಯವಿಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗಿಷ್ಟ ಬಂದಲ್ಲಿ ಇದ್ದುಕೊಂಡು ಜೀವನ ಸಾಗಿಸಲಿ ಎಂದರು.
ಟಿಪ್ಪ್ಪು ಜಯಂತಿಯನ್ನು ಮುಸಲ್ಮಾನರು ದೊಡ್ಡ ವಿಷಯವೆಂದು ತಿಳಿದುಕೊಳ್ಳಬಾರದು. ಸಕರ್ಾರಿ ಕಾರ್ಯಕ್ರಮವಾಗಿರುವುದರಿಂದ ಸಕರ್ಾರವೆ ಇದನ್ನು ನಿಭಾಯಿಸಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.
ಯಾವುದೇ ಧರ್ಮಕ್ಕೆ ನೋವನ್ನುಂಟುಮಾಡುವ ಕಾರ್ಯವನ್ನು ಯಾರೂ ಮಾಡಬಾರದೆಂದ ಇಸಾಕ್ ಖಾನ್, ಕಳೆದ ಬಾರಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿರಲಿಲ್ಲ. ಆದರೆ, ಪರ, ವಿರೋಧದ ಹೇಳಿಕೆಯಿಂದ ಜನ ಸೇರಿದರು ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸದಸ್ಯರಾದ ಜಬ್ಬಾರ್, ನಿಸಾರ್ ಹಾಗೂ ರಜಾಕ್ ಉಪಸ್ಥಿತರಿದ್ದರು.
Discussion about this post