ಚಾಮರಾಜನಗರ: ಕಾವೇರಿವಿವಾದದಲ್ಲಿ ಕರ್ನಾಟಕ ಸರ್ಕಾರದ ತೀರ್ಮಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ತಮಿಳು ಸಂಘದವರು ಚಾಮರಾಜನಗರದಲ್ಲಿಜಾಥನಡೆಸಿದರು. ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಜಾಥನಡೆಸಿದ ತಮಿಳರ ಸಂಘದಕಾರ್ಯಕರ್ತರು, ಕೇಂದ್ರ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಜಯಲಲಿತಾ ವಿರುದ್ದಘೋಷಣೆಕೂಗಿದರು.
ನಂತರ ಪಚ್ಚಪ್ಪ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿ, ಕಾವೇರಿ ನಮ್ಮದು ತಮಿಳುನಾಡಿಗೆ ಯಾವುದೇಕಾರಣಕ್ಕೂ ನೀರನ್ನು ಬಿಡಬಾರದೆಂದುಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ತಮಿಳರ ಸಂಘದ ಅಧ್ಯಕ್ಷ ಜಗದೀಶ್, ಕಾವೇರಿ ವಿಷಯವಾಗಿ ಕರ್ನಾಟಕಕ್ಕೆ ಪ್ರತಿಬಾರಿಯೂ ಅನ್ಯಾಯವಾಗುತ್ತಿದೆ. ಇಲ್ಲಿಯ ಜನರು ಕುಡಿಯುವನೀರಿಗಾಗಿ ಪರಿತಪಿಸುತ್ತಿರುವಾಗ ತಮಿಳುನಾಡಿಗೆ ಸಾಂಬಾಬೆಳೆಯಲು ನೀರು ಬಿಡುವುದು ಸರಿಯಾದಕ್ರಮವಲ್ಲಎಂದರು.
ಕರ್ನಾಟಕದ ನೆಲ, ಜಲ ಹಾಗೂ ಭಾಷೆಗೆತೊಂದರೆಯಾದರೆ ಅದರ ವಿರುದ್ದ ತಮಿಳುಸಂಘ ಹೋರಾಟ ನಡೆಸಲಿದೆಎಂದು ಜಗದೀಶ್ ಎರಿಸಿದರು.
Discussion about this post