ನವದೆಹಲಿ: ಆ;29: ಬಡ ಕುಟುಂಬದಲ್ಲಿ ಹುಟ್ಟಿ ಅದ್ಭುತ ಸಾಧನೆ ಮಾಡಿರುವ ಜುಮೈಕಾ ಅಥ್ಲೀಟ್ ಉಸೈನ್ ಬೋಲ್ಟ್ ದಿನಕ್ಕೆರಡು ಬಾರಿ ದನದ ಮಾಂಸ (ಬೀಫ್) ತಿಂದು ರಿಯೋ ಒಲಿಂಪಿಕ್ಸ್ನಲ್ಲಿ 9 ಚಿನ್ನದ ಪದಕ ಗೆದ್ದಿದ್ದಾನೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದರೊಬ್ಬರು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸದ ಉದಿತ್ರಾಜ್, ಉಸೈನ್ ಬೋಲ್ಟ್ ಬಡತನದಲ್ಲಿ ಹುಟ್ಟಿದ, ಅವನ ತರಬೇತದಾರನ ಸಲಹೆಯಂತೆ ಪ್ರತಿದಿನ ಎರಡು ಬಾರಿ ದನದ ಮಾಂಸ ತಿಂದು ದಕ್ಷ ಕ್ರೀಡಾಪಟುವಾಗಿದ್ದಾನೆ ಎಂದಿದ್ದಾನೆ.
ವಿಶೇಷವೆಂದರೆ ಬಿಜೆಪಿಯ ಪ್ರಮುಖ ವಿಷಯವೇ ದನದ ಮಾಂಸ ನಿಷೀಧ. ಹೀಗಿದ್ದರೂ ಈಶಾನ್ಯ ದೆಹಲಿಯ ಸಂಸದ ಮತ್ತು ದಲಿತ ನಾಯಕ ಉದಿತ್ ರಾಜ್ ಈ ಹೇಳಿಕೆ ಪಕ್ಷದಲ್ಲಿ ಭಾರೀ ಗೊಂದಲ ಉಂಟು ಮಾಡಿದೆ.
Discussion about this post