ನವದೆಹಲಿ, ಅ.9: ದ್ವಿಪಕ್ಷೀಯ ಸಂಬಂಧ ಹಾಗೂ ಭಯೋತ್ಪಾದನೆ ಈ ಎರಡರಲ್ಲಿ ಚೀನಾ ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ನಿಷೇಧ ಕುರಿತಂತೆ ಪ್ರತೀ ಬಾರಿ ಚರ್ಚೆಯಾದಾಗಲೂ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ತನ್ನ ನಡೆಯನ್ನು ಮತ್ತೆ ಸಮರ್ಥಿಸಿಕೊಂಡಿತ್ತು. ಚೀನಾದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಭಾರತ ಇಲ್ಲವೇ ಪಾಕಿಸ್ಥಾನ ಎರಡು ದೇಶಗಳಲ್ಲಿ ಒಂದನ್ನು ದೇಶವನ್ನು ಚೀನಾ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಭಯೋತ್ಪಾದನೆ ಹಾಗೂ ದ್ವಿಪಕ್ಷೀಯ ಸಂಬಂಧ ಒಂದೆಡೆ ಹೋಗಲು ಸಾಧ್ಯವಿಲ್ಲ. ಚೀನಾ ಭಾರತ ಇಲ್ಲವೇ ಪಾಕಿಸ್ತಾನ ಎರಡರಲ್ಲಿ ಒಂದನ್ನು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮಧ್ಯಮದವರೆಂಬ ಯಾವುದೇ ದಾರಿಯಿಲ್ಲ. ಚೀನಾ ಯಾವುದಾದರೂ ಒಂದು ನಿಲುವನ್ನು ಸ್ಪಷ್ಟಪಡಿಸಬೇಕು. ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಚೀನಾ ಪಾಕಿಸ್ತಾನದ ಪರವಾಗಿ ವರ್ತಿಸುತ್ತಿದೆ. ಮೊದಲೂ ಚೀನಾ ಭಯೋತ್ಪಾದನೆ ಕುರಿತಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈ ರೀತಿಯ ದ್ವಂದ್ವ ನಿಲುವಿನಿಂದ ಇಂಡೋ-ಚೀನಾದ ಸಂಬಂಧ ದೀರ್ಘಕಾಲ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.














