ಮುಂಬೈ:ಅ:30: ನಕಲಿ ನೋಟುಗಳ ಚಲಾವಣೆ ಹೆಚ್ಚಿರುವ ಹಿನ್ನಲೆಯಲ್ಲಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವಾಗ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಭಾರತೀಯ ರಿಸವರ್್ ಬ್ಯಾಂಕ್(ಆರ್ ಬಿಐ) ಸೂಚನೆ ನೀಡಿದೆ.
ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಸುಳಿವು ಇದೆ. ನೋಟು ಸ್ವೀಕರಿಸುವಾಗ ಪರಿಶೀಲಿಸುವುದು ಸೂಕ್ತ. ಸಾರ್ವಜನಿಕರ ಪ್ರತಿನಿತ್ಯದ ವ್ಯವಹಾರಗಳಲ್ಲಿ ಹೆಚ್ಚಿನ ಮೊತ್ತದ ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗುತ್ತಿದ್ದು, ಇದರ ಲಾಭ ಪಡೆದುಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರ್ ಬಿಐ ಹೇಳಿದೆ.
ನಕಲಿ ನೋಟುಗಳನ್ನು ಹತ್ತಿರದಿಂದ ನೋಡಿದರೆ ಅದು ಅಸಲಿಯೊ, ನಕಲಿಯೊ ಎಂದು ಗೊತ್ತಾಗುತ್ತದೆ. ನೋಟುಗಳ ಭದ್ರತಾ ಲಕ್ಷಣಗಳ ಬಗ್ಗೆ ಆರ್ ಬಿಐಯ ವೆಬ್ ಸೈಟ್ ನಲ್ಲಿ ಕೂಡ ಮಾಹಿತಿ ನೀಡಲಾಗಿದೆ. ನಕಲಿ ನೋಟುಗಳೆಂದು ಕಂಡುಬಂದ ತಕ್ಷಣ ಅದನ್ನು ಚಲಾವಣೆ ಮಾಡದಂತೆ, ಕೂಡಲೇ ಬ್ಯಾಂಕಿನ ಗಮನಕ್ಕೆ ತರುವಂತೆ ಬ್ಯಾಂಕ್ ಜನತೆಯಲ್ಲಿ ಮನವಿ ಮಾಡಿದೆ.















