ನವದೆಹಲಿ, ಅ.30: ಪ್ರತಿಯೊಬ್ಬರಿಗೂ ಜೀವನದಲ್ಲೊಮ್ಮೆ ವಿಮಾನದಲ್ಲಿ ಹಾರಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವುದು ಪ್ರತಿಯೊಬ್ಬರಿಗೂ ವಿಶೇಷ ಅನುಭವವನ್ನು ನೀಡುತ್ತದೆ. ಇದಕ್ಕೆ ಪೂರಕವಾಗಿ ಎಲ್ಲ ವಿಮಾನ ಯಾನ ಕಂಪೆನಿಗಳೂ ವಿಶೇಷ ರಿಯಾಯ್ತಿ ಹಾಗೂ ಸವಲತ್ತುಗಳನ್ನು ನೀಡುತ್ತವೆ. ಆದರೆ, ಇಲ್ಲೊಂದು ವಿಮಾನದಲ್ಲಿ ವಿಶೇಷ ಹಾಗೂ ವಿಚಿತ್ರ ಅವಕಾಶವನ್ನು ನೀಡಿದೆ.
ಸಂಪೂರ್ಣ ಶ್ರೀಮಂತರೇ ಪ್ರಯಾಣಿಸುವ ಜರ್ಮಿನಿಯ ಈ ವಿಮಾನವೊಂದರಲ್ಲಿ ಪ್ರಯಾಣಿಕರು ಸಂಪೂರ್ಣವಾಗಿ ನಗ್ನವಾಗಿ ಪ್ರಯಾಣಿಸಲು ಅವಕಾಶ ನೀಡಿತ್ತಂತೆ!
ಈ ಕುರಿತಂತೆ ಯೂಟ್ಯೂಬ್ ಚಾನಲ್ ವೊಂದು ವೀಡಿಯೋ ಪ್ರಕಟ ಮಾಡಿದ್ದು, ಸಂಪೂರ್ಣ ಮಾಹಿತಿಯನ್ನು ವೀಡಿಯೋದಲ್ಲಿ ಅಡಗಿಸಿದೆ. ಜರ್ಮನಿಯ ವಿಮಾನಯಾನ ಟ್ರಾವೆಲ್ ಏಜೆನ್ಸಿಯೊಂದು 2008ರಲ್ಲಿ ಈ ವಿಶೇಷ ಹಾಗೂ ವಿಚಿತ್ರ ಅವಕಾಶವೊಂದನ್ನು ನೀಡಿತ್ತಂತೆ. 2008ರಲ್ಲಿ ಜರ್ಮನಿಯ ಎರ್ ಫರ್ಟ್ ಸಿಟಿಯಿಂದ ಬಾಲ್ಟಿಕ್ ಸಮುದ್ರತೀರದ ನಗರಕ್ಕೆ ತೆರಳುವ ವಿಮಾನದಲ್ಲಿ ಈ ಅವಕಾಶವನ್ನು ನೀಡಲಾಗಿತ್ತಂತೆ. ಈ ಏಜೆನ್ಸಿಯಲ್ಲಿ ಟಿಕೆಟ್ ಬುಕ್ ಮಾಡಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿ ಪ್ರಯಾಣಿಸುವ ಅವಕಾಶವನ್ನು ನೀಡಿತ್ತಂತೆ.
ವಿಮಾನಯಾನ ಕಂಪೆನಿಗಳು ಹಾಗೂ ಏಜೆನ್ಸಿಗಳು ವಿಮಾನಯಾನ ಟಿಕೇಟ್ ಬುಕ್ ಮಾಡುವಾಗ ವಿವಿಧ ರೀತಿಯ ರಿಯಾಯ್ತಿ ಹಾಗೂ ಸವಲತ್ತುಗಳನ್ನು ನೀಡುವುದು ಸರ್ವೆ ಸಾಮಾನ್ಯ. ಆದರೆ, ಹಿಂದೆಲ್ಲೂ ಕೇಳಿರದ ಇಂತಹ ವಿಚಿತ್ರ ಆಪರ್ ನೀಡಿದ್ದು ವಿಚಾರದ ಕುರಿತಾಗಿನ ವೀಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.















