Read - < 1 minute
ವೆಲಿಂಗ್ಟನ್, ಸೆ.2: ನ್ಯೂಜಿಲೆಂಡ್ ನ ಉತ್ತರ ದ್ವೀಪ ಕರಾವಳಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿ, ಸಣ್ಣ ಪ್ರಮಾಣದ ಸುನಾಮಿಗೆ ಕಾರಣವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.1ರಷ್ಟು ದಾಖಲಾಗಿದೆ.
ಗಿಸ್ಬೋರ್ನ್ ನಗರದಿಂದ ಈಶಾನ್ಯಕ್ಕೆ 160 ಕಿ.ಮೀ.ದೂರದಲ್ಲಿ, ಸಮುದ್ರದ 19 ಕಿ.ಮೀ.ಆಳದಲ್ಲಿ ಭೂಕಂಪನವಾಗಿದೆ. ಇದು ಅಲ್ಪ ತೀವ್ರತೆಯ ಸುನಾಮಿಯನ್ನು ಸೃಷ್ಟಿಸಿತು ಎಂದು ಅಮೆರಿಕದ ಭೂಗರ್ಭ ಸಮೀಕ್ಷಾ ಕೇಂದ್ರ ಹೇಳಿದೆ. ಉತ್ತರ ದ್ವೀಪದಲ್ಲಿ ಭೂಕಂಪನದ ಅನುಭವವಾಗಿದೆ. ಇದಾದ ಬಳಿಕ ಸರಣಿಯಾಗಿ ಭೂಮಿ ಕಂಪಿಸಿದೆ.
ಭೂಕಂಪದ ತೀವ್ರತೆ ಪ್ರಬಲವಾಗಿತ್ತು. 10 ಸೆಕೆಂಡ್ ಗಳ ಕಾಲ ಭೂಮಿ ನಡುಗಿತು. ತನ್ನ ಮನೆಯಲ್ಲಿದ್ದ ಸಾಮಾನುಗಳು ಕೆಳಗೆ ಬಿದ್ದವು. ಬಾಟಲ್ಗಳು ಒಡೆದು ಹೋದವು. ಅಡುಗೆ ಮನೆಯಲ್ಲಿದ್ದ ಸಾಮಗ್ರಿಗಳು ಬಿದ್ದು ರಾಕ್ ಅಂಡ್ ರೋಲ್ ಸಂಗೀತದಂತೆ ಸದ್ದು ಮಾಡಿದವು. ಇದಾದ ಬಳಿಕವೂ ಮತ್ತೆ ಮತ್ತೆ ನಾಲ್ಕು ಬಾರಿ ಪ್ರಬಲ ಭೂಕಂಪನದ ಅನುಭವವಾಯಿತು ಎಂದು ಟೆಲ್ ಆರಾರೊವಾದ ಹಾಲಿಡೇ ಪಾರ್ಕ್ ಮಾಲೀಕ ಬಿಲ್ ಮಾರ್ಟಿನ್ ಹೇಳಿದ್ದಾರೆ.
Discussion about this post