Read - < 1 minute
ಕಲ್ಲಿಕೋಟೆ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೇರಳದ ಕಲ್ಲಿಕೋಟೆಯಿಂದ ಪಾಕಿಸ್ಥಾನಕ್ಕೆ ಕಠಿನ ಸಂದೇಶವೊಂದನ್ನು ರವಾನಿಸಲಿದ್ದಾರೆ . ರಾಷ್ಟ್ರೀಯ ಮಂಡಳಿ ಸಭೆಗಾಗಿ ಇಲ್ಲಿಗಾಗಮಿಸಲಿರುವ ಮೋದಿಯವರು ಇಲ್ಲಿನ ಬೃಹತ್ ರ್ಯಾಲಿಯೊಂದರಲ್ಲಿ ಮಾತನಾಡಲಿದ್ದಾರೆ. ಭಾರತೀಯ ಯೋಧರ ಹತ್ಯೆಗೈದ ಕೃತ್ಯವನ್ನು ಖಂಡಿಸಿ ನಿರ್ಣಯವೊಂದನ್ನು ಇಲ್ಲಿ ಕೈಗೊಳ್ಳಲಿದ್ದು, ದಾಳಿಕೋರರನ್ನು ದಂಡಿಸುವ ನಿಟ್ಟಿನಲ್ಲಿ ದೃಢನಿಲುವೊಂದನ್ನು ಸಾರಲಿದೆ. ಭಯೋತ್ಪಾದನೆಯನ್ನು ಸದೆಬಡಿಯುವಲ್ಲಿ ಮೋದಿ ಸರಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಕೇಂದ್ರದ ಪ್ರತಿಕ್ರಮ ಕೂಡಾ ಭಯೋತ್ಪಾದಕ ಪಾಕಿಸ್ಥಾನವನ್ನು ವಿಶ್ವಸಮುದಾಯದಲ್ಲಿ ಏಕಾಂಗಿಯನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಫಲಿತಾಂಶ ನೀಡಲಿದೆ ಎಂದು ಹುಸೇನ್ ನುಡಿದರು. ಇಡಿ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.ಇದರಲ್ಲಿ ಯಾವುದೇ ರಾಜಿ ಇಲ್ಲ ಎಂಬ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 1968ರ ಘೋಷಣೆಯ ಬೃಹತ್ ಬ್ಯಾನರ್ ಕಾರ್ಯಕಾರಿಣಿ ನಡೆಯುವ ಸ್ಥಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
Discussion about this post