Read - < 1 minute
ಮುಂಬೈ, ಸೆ.23-ಮುಂಬೈನ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷದ ಅಂಗಸಂಸ್ಥೆಯಾದ ಚಿತ್ರಪಥ್ ಸಂಘಟನೆ ಪಾಕಿಸ್ಥಾನದ ನಟ-ನಟಿಯರು ಭಾರತ ಬಿಟ್ಟು ತೊಲಗಬೇಕೆಂದು ಆಗ್ರಹಿಸಿದೆ.
ಭಾರತದಲ್ಲಿ ನಿರಂತರವಾಗಿ ಪಾಕಿಸ್ಥಾನ ಹಿಂಸಾಕೃತ್ಯಗಳನ್ನು ಎಸಗುತ್ತಿದೆ. ಅಲ್ಲದೇ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಭಂಗ ಉಂಟು ಮಾಡುತ್ತಿದೆ. ಭಾರತದ ಮೇಲೆ ದ್ವೇಷ ಸಾಧಿಸುವ ಪಾಕಿಗಳಿಗೇಕೆ ಭಾರತದಲ್ಲಿ ಆಶ್ರಯ ಎಂದು ಹೇಳಿದೆ. ಅಲ್ಲದೇ 48 ಗಂಟೆಗಳ ಸಮಯಾವಕಾಶ ನೀಡಿದ್ದು, ಅಷ್ಟರಲ್ಲಿ ಪಾಕ್ ಕಲಾವಿದರು ದೇಶದಿಂದ ಹೊರಹೋಗಬೇಕು, ಇಲ್ಲದಿದ್ದಲ್ಲಿ ತಾನೇ ಹೊರಕಳಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅಲ್ಲದೇ ದೇಶದ ಭದ್ರತೆ ಪ್ರಮುಖವೆನಿಸಿದ್ದ ಹಿನ್ನೆಲೆ ಈ ಆಗ್ರಹ ಮಾಡಿದ್ದೇವೆ ಎಂದು ಹೇಳಿದೆ.
ಪಾಕಿಸ್ಥಾನಿ ತಾರೆಗಳಿ ದೇಶ ಬಿಟ್ಟು ತೆರಳುವ ಸಂಬಂಧ ನಿರ್ದೇಶಕರಿಗೆ ಪತ್ರದ ಮುಖೇನ ತಿಳಿಸಿದ್ದಾಗಿ ಹೇಳಿದೆ. ದೇಶದಲ್ಲಿ ಕೋಟ್ಯಾಂತರ ಜನರಿದ್ದು, ಅದರಲ್ಲಿ ಕೋಟ್ಯಾಂತರ ಜನರು ಸೂಕ್ತ ಅವಕಾಶಗಳಿಗಾಗಿ ಪರದಾಡುತ್ತಿದ್ದಾರೆ. ಆದರೆ ಪಾಕಿಸ್ಥಾನಿಗಳು ಇಲ್ಲಿ ಬಂದು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ಮೊದಲು ಇಲ್ಲಿಂದ ತೆರಳಬೇಕು. ನಮ್ಮ ದೇಶದ ನಟರು ಪಾಕಿಸ್ಥಾನಿ ಪಾತ್ರಗಳ ನಿರ್ವಹಣೆಯನ್ನು ಬಿಡಬೇಕು ಎಂದು ಹೇಳಿದೆ.
ಈ ಹಿಂದೆಯೂ ಮಹಾರಾಷ್ಟ್ರದಲ್ಲಿ ಶಿವಸೇನೆ ಪಾಕಿಸ್ಥಾನಿ ತಾರೆಗಳು ಹಾಗೂ ಪಾಕಿಸ್ಥಾನಿ ವಿಷಯಾಧಾರಿಯ ಚಿತ್ರಗಳ ಪ್ರಚಾರಕ್ಕೆ ನಿಷೇಧ ಹೇರುವಂತೆ ಪ್ರತಿಭಟನೆ ನಡೆಸಿತ್ತು. ಹೇ ದಿಲ್ ಹೇ ಮುಷ್ಕಿಲ್ ಹಾಗೂ ರಯೀಸ್ ಚಿತ್ರಗಳ ಪ್ರಚಾರಕ್ಕೆ ವಿರೋಧಿಸಿತ್ತು. ಅಲ್ಲದೇ ಪಾಕಿಸ್ಥಾನಿ ಕಲಾವಿದರಾದ ಮೆಕಲ್ ಹಸನ್ ಹಾಗೂ ಘಜಲ್ ಗಾಯಕ ಗುಲಾಂ ಅಲಿ ಅವರ ಭಾರತದ ಕಚೇರಿಯನ್ನು ಪ್ರತಿಭಟಿಸಿ ರದ್ದುಗೊಳಿಸಿದ್ದವು. ಇದೀಗ ಚಿತ್ರಪಥ್ ಸಂಘ ಪಾಕಿಸ್ಥಾನ ನಟರಿಗೆ ನಿಷೇಧ ಹೇರುವ ಯತ್ನ ಮಾಡಿದೆ.
ಅಲ್ಲದೇ ಉರಿ ಸೇನಾ ನೆಲೆಯಲ್ಲಿ ನಡೆದ ಭೀಕರ ದಾಳಿಯಲ್ಲಿ ಭಾರತದ 18 ಯೋಧರು ಹುತಾತ್ಮರಾಗಿದ್ದರು. ಈ ದಾಳಿ ನಡೆಸಿದ ಮದ್ದು ಗುಂಡುಗಳ ಮೇಲೆ ಪಾಕಿಸ್ಥಾನದ ಗುರುತು ಇತ್ತು. ಈ ಹಿನ್ನೆಲೆ ಆರೋಪಿಗಳಿಗೆ ಪ್ರಧಾನಿ ಸೂಕ್ತ ಉತ್ತರ ನೀಡಲು ಕ್ರಮ ಜರುಗಿಸಬೇಕು ಎಂದಿದೆ.
Discussion about this post