ಕಲ್ಬುರ್ಗಿ/ರಾಯಚೂರು, ಅ.13: ಭಾರತದಲ್ಲಿ ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ತಮ್ಮ ಬೆಂಬಲ ಇದೆ ಎಂದು ಪುನೀತ್ ರಾಜಕುಮಾರ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ದೊಡ್ಮನೆ ಹುಡ್ಗ ಚಿತ್ರ ಪ್ರಚಾರಕ್ಕೆ ಆಗಮಿಸಿದ ನಟ ಪುನಿತ್ ರಾಜ್ ಕುಮಾರ್ ನಗರದ ತಿಮ್ಮಪುರಿ ಸರ್ಕಲ್ ನಿಂದ ಸಂಗಮ್ ಚಿತ್ರ ಮಂದಿರದವರಿಗೆ ತೆರದ ವಾಹನದಲ್ಲಿ ರೊಡ ಶೋ ನಡೆಸಿದರು. ಆದರೆ ನಟ ಪುನಿತ್ ರಾಜ್ ಕುಮಾರ್ ನಗರಕ್ಕೆ ಆಗಮಿಸುತ್ತಿದ್ದಂತೆ ಬಾರಿ ಅಭಿಮಾನಿಗಳು ಸೇರಿದ್ದರು. ನಂತರ ಮಾತನಾಡಿದ ಪುನಿತ್ ರಾಜ್ ಕುಮಾರ್, ನಮಗೆ ಕಲೆಗಿಂತ ದೇಶ ದೊಡ್ಡದು ನಾವೆಲ್ಲಾ ಮೊದಲು ಭಾರತೀಯರು, ನಂತರ ಕಲಾವಿದರು ಹೀಗಾಗಿ ದೇಶಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ನಮ್ಮ ಸಹಮತ ಎಂದು ಸ್ಪಷ್ಟಪಡಿಸಿದರು.

ಪಾಕ್ ಕಲಾವಿದರ ನಿಷೇದ ಪ್ರಸ್ತಾಪಕ್ಕೆ ಪುನಿತ್ ಪ್ರತಿಕ್ರಿಯೆ ನೀಡಿದ ಅವರು ಭಾರತದಲ್ಲಿ ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ತಮ್ಮ ಬೆಂಬಲ ಇದೆ ಎಂದು ತಿಳಿಸಿದರು. ಇನ್ನು ಕಾವೇರಿ ನದಿ ನಿರು ಹಂಚಿಕೆ ವಿಚಾರ ಮಾತ್ರವಲ್ಲ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಿದ್ದೇವೆ ಆದರೆ ಉತ್ತರ ಕರ್ನಾಟಕದ ಬಗ್ಗೆ ಚಿತ್ರರಂಗ ಯಾವತ್ತು ನಿರ್ಲಕ್ಷತನ ಮಾಡಿಲ್ಲ, ಹೀಗಾಗಿ ಕನ್ನಡಿಗರೆಲ್ಲಾ ಒಂದೆ. ನಾವೆಲ್ಲಾ ಒಂದೇ ತಾಯಿ ಮಕ್ಕಳು ಇದ್ದಂತೆ ಇದರಲ್ಲಿ ಯಾವುದೇ ಬೇಧ ಭಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.















