ಮುಂಬೈ : ವಿಶ್ವದ ಮುಂದೆ ಪಾಕಿಸ್ಥಾನದ ನೈಜ ಮುಖವನ್ನು ಬಯಲುಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಯತ್ನಗಳನ್ನು ಕೊಂಡಾಡಿರುವ ಶಿವಸೇನೆ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೇಂದ್ರದಲ್ಲನ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು ಒತ್ತಾಯಿಸಿದೆ.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಜನರು ತಮ್ಮ ಪ್ರದೇಶದಲ್ಲಿ ಬಹಳ ಸಂತೋಷದಿಂದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಅಥವಾ ನಮ್ಮ ಕಾಶ್ಮೀರಿ ಜನತೆಗೆ ಮತ್ತೆ ಮತ್ತೆ ಅದೇ ಚಿತ್ರಣವನ್ನು ತೋರಿಸಲು ತಾನು ಪ್ರಯತ್ನಿಸುವುದಾಗಿ ಪಾಕಿಸ್ಥಾನ ಸರಕಾರ ಹೇಳಿಕೊಳ್ಳುತ್ತಿರುವುದು ಬಹಳ ದೊಡ್ಡ ಸಂಗತಿಯಾಗಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದರು.
ಆದರೆ ವಾಸ್ತವ ಏನೆಂದರೆ, ಅಲ್ಲಿ ವಾಸವಿರುವ ಜನರು ಮುಕ್ತವಾಗಿ ಮಾತನಾಡಿದಾಗ ಅಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದು ಪಾಕಿಸ್ಥಾನ ಎಂಬುದು ಇಡೀ ಜಗತ್ತಿಗೆ ಗೊತ್ತಾಗುತ್ತದೆ. ಇದೀಗ ಜಗತ್ತಿನ ಮುಂದೆ ಪಾಕಿಸ್ಥಾನದ ನೈಜ ಮುಖವನ್ನು ಬಯಲುಗೊಳಿಸಿರುವ ರೀತಿ ಭಾರತದ ರಾಜತಾಂತ್ರಿಕತೆಯ ವಿಜಯ ಎಂದು ಅವರು ಹೇಳಿದರು.
Discussion about this post