ನವದೆಹಲಿ, ಆ.31: ಕೆಲವು ದಿನಗಳ ಹಿಂದೆ ಇಳಿಕೆಯಾಗಿದ್ದ ಪೆಟ್ರೋಲ್ ಡಿಸೇಲ್ ದರ ಈಗ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.38 ರೂ. ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡಿಸೇಲ್ ಬೆಲೆ 2.67 ರೂ. ಹೆಚ್ಚಳವಾಗಿದೆ.
ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಗಸ್ಟ್ 16ರಂದು ಪೆಟ್ರೋಲ್ ದರ 1 ರೂ. ಕಡಿಮೆಯಾಗಿದ್ದರೆ, ಡಿಸೇಲ್ ದರ 2 ರೂ. ಇಳಿಕೆಯಾಗಿತ್ತು. ಆಗಸ್ಟ್ 1ರಂದು ಪೆಟ್ರೋಲ್ ದರ 1.42 ರೂ. ಇಳಿಯಾಗಿದ್ದರೆ, ಡಿಸೇಲ್ ಬೆಲೆ 2.01 ರೂ. ಇಳಿಕೆಯಾಗಿತ್ತು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಸರ್ಕಾರ ನಿಯಂತ್ರಣ ಮುಕ್ತಗೊಳಿಸಿದ ಕಾರಣ ಪ್ರತಿ 15 ದಿನಕ್ಕೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವನ್ನು ನೋಡಿಕೊಂಡು ಪರಿಷ್ಕರಿಸುತ್ತಿರುತ್ತವೆ.
ಬೆಂಗಳೂರಿನಲ್ಲಿ ಎಷ್ಟು?:
ಪೆಟ್ರೋಲ್ ಹಳೆಯ ಬೆಲೆ: 64.51 ರೂ. — ಪರಿಷ್ಕೃತ ಬೆಲೆ: 67.89 ರೂ.
ಡೀಸೆಲ್ ಹಳೆಯ ಬೆಲೆ: 53.84 ರೂ. — ಪರಿಷ್ಕೃತ ಬೆಲೆ: 56.61 ರೂ.
ಯಾವ ನಗರದಲ್ಲಿ ಪರಿಷ್ಕೃತ ಬೆಲೆ ಎಷ್ಟು?
ನಗರಗಳು | ಬೆಲೆ |
ನವದೆಹಲಿ | 52.94 |
ಕೋಲ್ಕತ್ತಾ | 55.15 |
ಮುಂಬೈ | 58.48 |
ಚೆನ್ನೈ | 54.43 |
Discussion about this post