ನವದೆಹಲಿ:ಆ-29:ಭಾರತಕ್ಕೆ ಬರುವ ವಿದೇಶಿ ಪ್ರವಾಸಿ ಮಹಿಳೆಯರು ಶಾರ್ಟ್ ಸ್ಕರ್ಟ್ ಹಾಗೂ ಇತರ ಪ್ರಚೋದನಕಾರಿ ಉಡುಪುಗಳನ್ನು ಧರಿಸಬೇಡಿ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಸಲಹೆ ನೀಡಿದ್ದಾರೆ.
ತಾಜ್ ಮಹಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾದಿದ ಅವರು, ಸುರಕ್ಷತೆ ದೃಷ್ಟಿಯಿಂದ ವಿದೇಶಿ ಮಹಿಳೆಯರು ಭಾರತದಲ್ಲಿ ಸ್ಕರ್ಟ್ ನಂತಹ ಉಡುಪು ಧರಿಸಬಾರದು. ಭಾರತೀಯ ಸಂಸ್ಕೃತಿ ವಿದೇಶಿ ಸಂಸ್ಕೃತಿಗಿಂತ ಭಿನ್ನವಾದದ್ದು. ಇಲ್ಲಿನ ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ವಸ್ತ್ರ ಸಂಹಿತೆ ಇದೆ. ಇದನ್ನು ವಿದೇಶಿ ಪ್ರವಾಸಿಗರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ವಿದೇಶಿ ಪ್ರವಾಸಿಗರಿಗೆ ನೀಡಲಾಗುವ ಸಲಹಾ ಕರಪತ್ರದಲ್ಲಿ ಇದರ ಬಗ್ಗೆ ವಿವರಿಸಲಾಗಿದೆ. ಅವರು ಮುನೆಚ್ಚರಿಕೆಯ ಕ್ರಮವಾಗಿ ಅನುಸರಿಸಬೇಕಾದ ಸಲಹೆಗಳು ಕರಪತ್ರದಲ್ಲಿದೆ. ವಿದೇಶೀಯರು ತಮ್ಮ ಪ್ರವಾಸ ವೇಳೆ ಭಾರತದ ಸಣ್ಣ ನಗರ – ಪಟ್ಟಣಗಳಲ್ಲಿ ಇರುವಾಗ ರಾತ್ರಿಯ ಹೊತ್ತು ಒಂಟಿಯಾಗಿ ಸುತ್ತಾಡಬಾರದು ಮತ್ತು ಸ್ಕಟರ್್ ತೊಡಕೂಡದು ಎಂಬ ಸಲಹೆ ಇದೆ. ಅಲ್ಲದೆ ಅವರು ತಮ್ಮ ಓಡಾಟಕ್ಕೆ ಬಳಸುವ ಬಾಡಿಗೆ ಕಾರಿನ ಫೋಟೋ ಒಂದನ್ನು ತೆಗೆದಿರಿಸಿಕೊಳ್ಳಬೇಕು ಮತ್ತು ಅದನ್ನು ತಮ್ಮ ಮಿತ್ರರಿಗೆ ಕಳುಹಿಸಬೇಕು’ ಎಂದು ಕೇಂದ್ರ ಸಚಿವರು ವಿವರಿಸಿದರು.
ಭಾರತವು ಒಂದು ಸಾಂಸ್ಕೃತಿಕ ದೇಶವಾಗಿದ್ದು ಇಲ್ಲಿನ ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ವಸ್ತ್ರ ಸಂಹಿತೆ ಇದೆ. ಇದನ್ನು ವಿದೇಶಿ ಪ್ರವಾಸಿಗರು ಮನಸ್ಸಿನಲ್ಲಿಟ್ಟುಕೊಂಡು ಪ್ರಚೋದನಕಾರಿ ಉಡುಗೆಗಳನ್ನು ಧರಿಸದಿರುವುದೇ ಕ್ಷೇಮ ಎಂದು ತಿಳಿಸಿದರು.
Discussion about this post