ಇಸ್ಲಾಮಾಬಾದ್, ಸೆ.19: ಪಾಕಿಸ್ಥಾನದ ಕ್ರೂರ ಕೈಯಡಿ ಸಿಲುಕಿ ನರಳುತ್ತಿರುವ ಬಲೂಚಿಸ್ಥಾನದಲ್ಲಿ ಮಾನವ ಹಕ್ಕು ಉಲ್ಲಂಘನೆಯಾದ ಮತ್ತೊಂದು ವರದಿ ಪ್ರಕಟವಾಗಿದ್ದು, ಕಳೆದ ಆರು ವರ್ಷಗಳಲ್ಲಿ ಒಂದು ಸಾವಿರ ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಬಲೂಚಿಸ್ತಾನವೊಂದರಲ್ಲೇ ಕಳೆದ ೬ ವರ್ಷಗಳಲ್ಲಿ ಗುಂಡು ಹೊಕ್ಕಿದ ೧,೦೦೦ ಮೃತ ದೇಹಗಳು ಸಿಕ್ಕಿವೆ.
ಆಘಾತಕಾರಿ ಸಂಗತಿ ಎಂದರೆ ೧ ಸಾವಿರ ಮೃತದೇಗಳು ಪತ್ತೆಯೆಯಾಗಿರುವುದರ ಜೊತೆಗೆ ೧೧೨ ಜನರು ನಾಪತ್ತೆಯಾಗಿದ್ದಾರೆ. ೨೦೧೧ ರ ಬಳಿಕ ಬಲೂಚಿಸ್ತಾನದಲ್ಲಿ ವಿವಾದ ಅಥವಾ ಉದ್ದೇಶಪೂರ್ವಕವಾಗಿ ೧,೮೩೭ ಜನರನ್ನು ಹತ್ಯೆ ಮಾಡಲಾಗಿದ್ದು ಇದರಲ್ಲಿ ಹಲವು ಮೃತದೇಹಗಳ ಗುರುತು ಸಿಗದಂತೆ ಮುಖವನ್ನು ಸುಟ್ಟು ಹಾಕಲಾಗಿದೆ.
ಅಂಗಾಗಳನ್ನು ಕತ್ತರಿಸಿರುವ ಸ್ಥಿತಿಯಲ್ಲಿದ್ದ ಮೃತ ದೇಹಗಳ ಪೈಕಿ ಶೇ.೫೧ ರಷ್ಟು ಬಲೂಚ್‌ಗಳದ್ದಾಗಿದೆ. ಇನ್ನು ಶೇ.೨೨ ರಷ್ಟು ಮೃತದೇಹಗಳು ಪಷ್ಟುನ್ ರದ್ದಾಗಿದ್ದು ಉಳಿದ ಮೃತದೇಹಗಳು ಪಂಜಾಬಿಗಳು, ಅಫ್ಘನ್ ನಿರಾಶ್ರಿತರದ್ದು ಹಾಗೂ ಇತರ ಮುಸ್ಲಿಮೇತರರದ್ದಾಗಿದೆ.
ಕಳೆದ ೬ ವರ್ಷಗಳ ಅವಧಿಯಲ್ಲಿ ಭಯೋತ್ಪಾದಕರ ದಾಳಿಯಿಂದ ೩,೪೭೦ ಜನರು ಗಾಯಗೊಂಡಿದ್ದಾರೆ. ೨೦೧೦ ರಲ್ಲಿ ೧೦೨ ಮೃತದೇಹಗಳು, ೨೦೧೧ ರಲ್ಲಿ ೨೦೩ ಮೃತ ದೇಹಗಳು, ೨೦೧೨ ರಲ್ಲಿ ೧೬೬ ಮೃತದೇಹಗಳು, ೨೦೧೩ ರಲ್ಲಿ ೧೬೮ ಮೃತದೇಹಗಳು, ೨೦೧೪ ರಲ್ಲಿ ೧೬೫ ಮೃತ ದೇಹಗಳು, ೨೦೧೫ ರಲ್ಲಿ ೧೨೯ ಮೃತ ದೇಹಗಳು ಹಾಗೂ ಈ ವರ್ಷ ಗುಂಡು ಹೊಕ್ಕಿರುವ ೧೭ ಶವಗಳನ್ನು ಬಲೂಚಿಸ್ತಾನದ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ.
Discussion about this post